ಪೊಲೀಸ್ ಸರ್ಪಗಾವಲಲ್ಲಿ ನಡೆದ ಪರೀಕ್ಷೆ

04ydg04
Published on

ಯಾದಗಿರಿ: ಸರಕಾರದ ವಿವಿಧ ಇಲಾಖೆಗಳ ಗ್ರೂಪ್ ಸಿ. ವೃಂದದ ಹುದ್ದೆಗಳಿಗೆ ಕೆಪಿಎಸ್ಸಿ ವತಿಯಿಂದ ಶನಿವಾರ ಪೊಲೀಸ್ ಸರ್ಪಗಾವಲಿನಲ್ಲಿ ಪರೀಕ್ಷೆ ಜರುಗಿದವು.
ಕನ್ನಡ ಭಾಷಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆದವು. ಕಳೆದ ವಾರ ಕೆಇಎ ಪರೀಕ್ಷೆಯಲ್ಲಿ ಅಭ್ಯರ್ಥಿ ಬಳಿ ಬ್ಲೂಟೂತ್ ಡಿವೈಸ್ ಪತ್ತೆಯಾದ ಪ್ರಕರಣ ಇಡೀ ರಾಜ್ಯ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಅಕ್ರಮದ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಶನಿವಾರ ನಗರದ 5 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯ ಮೇಲೆ ತೀವೃ ನಿಗಾ ವಹಿಸಿತ್ತು.

ಬೆಳಗ್ಗೆ 8 ಗಂಟೆಗೆ ಪೊಲೀಸ್ ಸಿಬ್ಬಂದಿ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪ್ರತಿಯೊಂದು ಕೋಣೆಗಳನ್ನು ತಪಾಸಣೆ ನಡೆಸಿದರು. ಇತ್ತ ಇಎನ್ಟಿ ತಜ್ಞರು ಅಭ್ಯರ್ಥಿಗಳ ಕಿವಿ, ಮೂಗು, ಶಟರ್್ ಕಾಲರ್ ಹೀಗೆ ಅರ್ಧ ಗಂಟೆಗಳ ಕಾಲ ಮೆಟಲ್ ಡಿಟೆಕ್ಟರ್ನಿಂದ ತಪಾಸಣೆಗೊಳಪಡಿಸಿದರು. ಕಿವಿಯೋಲೆ, ಚಿನ್ನದ ಚೈನ್, ಕಾಲುಂಗುರ ತೆಗೆಸಲಾಯಿತು.

ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಭದ್ರತೆಗಾಗಿ ಒಬ್ಬ ಡಿವೈಎಸ್ಪಿ, ಇಬ್ಬರು ಸಿಪಿಐ, 6 ಜನ ಪಿಎಸ್ಐ ಸೇರಿ ನೂರಕ್ಕೂ ಅಧಿಕ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿತ್ತು. ಇದಲ್ಲದೆ ಜಿಲ್ಲಾಡಳಿತ ವೀಕ್ಷಕರನ್ನು ನೇಮಕ ಮಾಡಿ ಆದೇಶಿಸಿತ್ತು. ಇನ್ನೂ ಕೇಂದ್ರಗಳ ಸುತ್ತಮುತ್ತ 300 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ವಾಹನ ನಿಲುಗಡೆ, ಗುಂಪುಗಟ್ಟಿ ನಿಲ್ಲುವುದನ್ನು ಪೊಲೀಸರು ತಡೆಯುತ್ತಿರುವುದು ಕಂಡು ಬಂದಿತು. ಭಾನುವಾರವೂ ಸಹ ಪರೀಕ್ಷೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net