ಪೊಲೀಸ್ ಶ್ವಾನ ಚಿಟ್ಟಿ ನಿಧನ

CTD 12 POLICE SHAVAN CHITTI DETAH--002
Published on

ಚಿತ್ರದುರ್ಗ:ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕರ್ತವ್ಯದಲ್ಲಿದ್ದ ಶ್ವಾನ ‘ಚಿಟ್ಟಿ’ (10) ವಯೋಸಹಜ ಕಾಯಿಲೆಗಳಿಂದ ಬುಧವಾರ ಸಂಜೆ ನಿಧನ ಹೊಂದಿದ್ದು, ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಾಧರಗಳೊಂದಿಗೆ ಗುರುವಾರ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಿತು.
2014 ಜೂನ್‌ನಿಂದ 8 ತಿಂಗಳ ತರಬೇತಿ ಪಡೆದಿದ್ದ ಜರ್ಮನ್ ಶೆಪರ್ಡ್ ತಳಿಯ ಈ ಶ್ವಾನ, ಸ್ಫೋಟಕ ಪತ್ತೆ ಕಾರ‌್ಯಕ್ಕೆ 2015 ಫೆ.13ರಂದು ಸೇರ್ಪಡೆಯಾಗಿತ್ತು. 2016ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಚಿಟ್ಟಿ ಪ್ರಥಮ ಸ್ಥಾನ ಪಡೆದಿತ್ತು.
ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮತ್ತಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net