ಪೊಲೀಸ್ ಬಡಾವಣೆಯಲ್ಲೇ ಮನೆಗೆ ನುಗ್ಗಿ ಚಿನ್ನದ ಸರ ಕಸಿದು ಪರಾರಿ

Gold Chain
Published on

ಮೈಸೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿರುವ ಪೊಲೀಸ್ ಬಡಾವಣೆಯ 2ನೇ ಹಂತದ ಮನೆಯೊಂದಕ್ಕೆ ನುಗ್ಗಿದ ಅಪರಿಚಿತರ ತಂಡ ಮಹಿಳೆಯ 22 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದೆ.

ಗಿರೀಶ್ ಎಂಬುವವರ ಮನೆಯಲ್ಲಿ ಕಳವು ನಡೆದಿದ್ದು, ಗುರುವಾರ ರಾತ್ರಿ ಮನೆಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡವು ಮಚ್ಚು ತೋರಿಸಿ, ಮನೆಯಲ್ಲಿದ್ದವರನ್ನು ಬೆದರಿಸಿ ಈ ಕೃತ್ಯ ಎಸಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಆಲನಹಳ್ಳಿ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net