

ಕಲಬುರಗಿ: ನಗರದಲ್ಲಿ ಕೆಐಎಸ್ಎ್ ಪೊಲೀಸ್ ಪೇದೆಯದ್ದು ಸೇರಿ ಪ್ರತ್ಯೇಕ ಕಡೆ ಮೂರು ಬೈಕ್ ಕಳ್ಳತನ ಮಾಡಿದ ಟನೆ ನಡೆದಿದೆ. ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಕುಸನೂರ ರಸ್ತೆಯ ತಿಲಕನಗರದ ರಾಜಾಪುರ ರ‍್ಕಿಡ್ ಕಾಂಪ್ಲೆಕ್ಸ್ ಎದುರು ರಾತ್ರಿ ೧೦ಕ್ಕೆ ನಿಲ್ಲಿಸಿದ ಬೈಕ್ ಬೆಳಗ್ಗೆ ನೋಡುವಷ್ಟರಲ್ಲಿ ಕಳ್ಳತನವಾಗಿದೆ. ಓಂ ನಗರದ ಮಂಜುನಾಥ ಅವರ ೨೫ ರೂ. ಮೌಲ್ಯದ ಬೈಕ್ ಕಳೆದುಕೊಂಡವರು.
ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಯನ ಬಡಾವಣೆಯ ಖಾಜಾ ಶಾಲೆ ಹತ್ತಿರದ ದಾರುಲ್ ಉಲುಮ್ ಮದರಸಾ ಎದುರು ಬೈಕ್ ನಿಲ್ಲಿಸಿದ್ದು, ಒಳಗೆ ಹೋಗಿ ವಾಪಸ್ ಬರುವ ಮುನ್ನವೇ ಬೈಕ್ ಕಳ್ಳತನವಾಗಿದೆ. ಸೈಯದ್ ಅಶ್ರ್ ಹುಸೇನ್ ಅವರ ೩೦ ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನವಾಗಿದೆ.
ಸಬ್ ರ‍್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಶೀಣ್ ಕಾಲನಿಯ ಮನೆ ಎದುರು ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ. ಕೆಎಸ್ಐಎಸ್ಎ್ ಪೊಲೀಸ್ ಕಾನ್ಸ್ಟೇಬಲ್ ಮಹ್ಮದ್ ಯುನೂಸ್ ಅವರ ೫೦ ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನವಾಗಿದೆ.