ಪೊಲೀಸ್ ಪೇದೆ ಆತ್ಮಹತ್ಯೆ

crime
Published on

ಬಸವಕಲ್ಯಾಣ: ಪೊಲೀಸ್ ಪೇದೆಯೊಬ್ಬರು ನಗರದ ಟೂರಿಸ್ಟ್ (ಲಾಡ್ಜ್​ ) ಹೋಟೆಲ್ ಕೋಣೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ ನಾಯಕ(೨೬) ಶವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಜಯನಗರ ಜಿಲ್ಲೆ ಉದಯಪುರ ತಾಂಡಾ ನಿವಾಸಿ ಆಗಿರುವ ಉಮೇಶ, ಸುಮಾರು ಎರಡು ವರ್ಷದಿಂದ ನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುಮನಾಬಾದ್ ಎಎಸ್‌ಪಿ ಶಿವಾಂಶು ರಾಜಪುತ, ಪಿಎಸ್‌ಐ ಅಬ್ದೀಷ್ ವಾಘಮೋಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net