ಪೊಲೀಸ್ ದೌರ್ಜನ್ಯಕ್ಕೆ ಸಿಡಿದ ಕೋಲಿ ಸಮಾಜು

1208 MLK 01
ಮಳಖೇಡ ಪಿಎಸ್‌ಐ ವಜಾಕ್ಕೆ ಆಗ್ರಹಿಸಿ ಸೇಡಂ ತಾಲೂಕು ಕೊಲಿ ಕಬ್ಬಲಿಗ ಸಮಾಜದವರು ಮಳಖೇಡದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್‌ಗೆ ಮನವಿಪತ್ರ ಸಲ್ಲಿಸಿದರು. ಮಲ್ಲಿಕಾರ್ಜುನ ಮೆಕಾನಿಕ್, ಸುನಿತಾ ತಳವಾರ, ದೊಡ್ಡಪ್ಪ ಭೈಯಾರ್ ಇತರರಿದ್ದರು.
Published on

ಮಳಖೇಡ: ಕೊಲಿ ಕಬ್ಬಲಿಗ ಸಮಾಜದವರ ಮೇಲೆ ಪೊಲೀಸರ ನಿರಂತರ ದೌರ್ಜನ್ಯ ಖಂಡಿಸಿ ಮತ್ತು ಪಿಎಸ್‌ಐ ಸಂಗಮೇಶ ಅಂಗಡಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸೇಡಂ ತಾಲೂಕು ಕೊಲಿ ಕಬ್ಬಲಿಗ ಸಮಾಜ ಸಂಘದಿAದ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಕೊಂಕನಹಳ್ಳಿ ಗ್ರಾಮದ ಆಂಜನೇಯ ದೇಗುಲ ಪಕ್ಕ ನೆಟ್ಟಿರುವ ಅಂಬಿಗರ ಚೌಡಯ್ಯ ನಾಮಫಲಕ ವಿಷಯದಲ್ಲಿ ಕೆಲವರ ದೂರಿನನ್ವಯ ಪಿಎಸ್‌ಐ ವಿಚಾರಿಸಿ ಬೆದರಿಕೆ ಹಾಕಿದ್ದರಿಂದ ಸಮಾಜದ ಮುಖಂಡ ಹಣಮಂತಪ್ಪ ಬಾವನೋರ ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪಿಎಸ್‌ಐ ಅವರನ್ನು ತಕ್ಷಣ ವಜಾಗೊಳಿಸಿ ಆಸ್ಪತ್ರೆ ಸೇರಿದ ಹಣಮಂತಪ್ಪ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಡಿವೈಎಸ್‌ಪಿಗೆ ಮನವಿಪತ್ರ ನೀಡಲು ಒಪ್ಪಲಿಲ್ಲ. ಹೀಗಾಗಿ ಎರಡು ಗಂಟೆ ಬಳಿಕ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ಬಂದು ಮನವಿ ಸ್ವೀಕರಿಸಿ, ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನಾತ್ಮಕ ಕಮ ಕೈಗೊಳ್ಳುವುದರ ಜತೆಗೆ ನೊಂದವರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಸAಘದ ಅಧ್ಯಕ್ಷ ಮಲ್ಲಿಕಾರ್ಜುನ ಮೆಕಾನಿಕ್, ಕಾರ್ಯದರ್ಶಿ ಮಹಾದೇವಪ್ಪ ಗೋಣಿ, ಸುನಿತಾ ತಳವಾರ, ದೊಡ್ಡಪ್ಪ ಭೈಯಾರ್, ಸತೀಶ ತಳವಾರ, ರಮೇಶ ಏರಿ, ಪ್ರಶಾಂತ ಜಮಾದಾರ, ಶರಣು ಜಮಾದಾರ, ವೆಂಕಟಪ್ಪ ಮದಕಲ್, ಶಾಂತಕುಮಾರ ಚನ್ನಕ್ಕಿ, ಬಸವರಾಜ ಮಲಘಾಣ ಇತರರು ಪಾಲ್ಗೊಂಡಿದ್ದರು.

ಡಿವೈಎಸ್‌ಪಿ ಎಸ್.ಎಸ್. ಹಿರೇಮಠ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ದೌಲತ್ ಕುರಿ, ಪಿಎಸ್‌ಐ ಜಾಕನಳ್ಳಿ ನೇತೃತ್ವದಲ್ಲಿ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net