ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ

MLK MANAVI 22
Published on

ಮೊಳಕಾಲ್ಮೂರು: ತಾಲೂಕಿನ ಬಿ.ಜಿ.ಕೆರೆ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ರೈತಸಂಘ, ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಮೊಳಕಾಲ್ಮೂರು ವೃತ್ತ ನಿರೀಕ್ಷಕರಿಗೆ ಶನಿವಾರ ಮನವಿ ಸಲ್ಲಿಸಿದ ಕಾರ್ಯಕರ್ತರು, ಬಿ.ಜಿ.ಕೆರೆ ಗ್ರಾಮದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋದು ಹೋಗಿದ್ದು, ರಸ್ತೆ ಅಪಘಾತ ಸೇರಿ ವಿವಿಧ ದುರ್ಘಟನೆಗಳು ಸಂಭವಿಸುತ್ತವೆ. ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆಗೆ ಠಾಣೆಯನ್ನು ಮೇಲ್ದರ್ಜೆಗೇರಿಸಿ, ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ರಾಂಪುರ ಸೇರಿ ತಾಲೂಕಿನ ಹಲವಡೆ ಅನಧಿಕೃತವಾಗಿ ಆಟೋ ಸೇರಿ ವಿವಿಧ ಸರಕು ವಾಹನಗಳು ಸಂಚರಿಸುತ್ತವೆ. ಜತೆಗೆ ಜೂಜು, ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಮೇಲ್ದರ್ಜೆಗೇರಿಸುವುದು ಅಗತ್ಯ ಎಂದರು.

ಮುಖಂಡರಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಕೊಂಡಾಪುರ ಪರಮೇಶಿ, ರವಿಕುಮಾರ, ಬಿ.ಟಿ.ನಾಗಭೂಷಣ, ನಾಗರಾಜ್, ಚಂದ್ರಣ್ಣ, ಸಂಜೀವಮೂರ್ತಿ, ಬಡೋಬನಾಯಕ, ಮಹೇಂದ್ರ, ನಿಂಗಣ್ಣ, ಮುನ್ನಾ, ಮಂಜುನಾಥ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಇತರರಿದ್ದರು.

ಅಪಘಾತಗಳ ಕಡಿವಾಣಕ್ಕೆ ರಸ್ತೆ ಸುರಕ್ಷತೆ ಕ್ರಮಗಳಿಗೆ ಕಠಿಣ ನಿರ್ಧಾರ ಹಾಗೂ ಸಮಾಜದಲ್ಲಿ ಶಾಂತಿ ಸೌಹಾರ್ದ ಕಾಪಾಡುವುದೆ ಪೊಲೀಸ್ ಇಲಾಖೆಯ ಗುರಿ. ಇದಕ್ಕೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಠಾಣೆ ಮೇಲ್ದರ್ಜೆಗೇರಿಸುವ ಸಂಬಂಧ ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು.
ಎನ್.ಸತೀಶ್, ಸಿಪಿಐ, ಮೊಳಕಾಲ್ಮೂರು
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net