

ಶಿವಮೊಗ್ಗ: ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಕಾರು ಡಿಕ್ಕಿ ಹೊಡೆದ ಪರಿಣಾಮ ತುಂಗಾನಗರ ಠಾಣೆ ಪಿಎಸ್ಐ ತಿರುಮಲೇಶ್ ಇದ್ದ ಪೊಲೀಸ್ ಜೀಪ್ ಪಲ್ಟಿಯಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಿರುಮಲೇಶ್ ಎಂದಿನಂತೆ ಕರ್ತವ್ಯದಲ್ಲಿದ್ದಾಗ ವಿವೇಕಾನಂದ ಬಡಾವಣೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಕಾರು ಜೀಪಿಗೆ ಅಪ್ಪಳಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ಪಿಎಸ್ಐ ತಿರುಮಲೇಶ್ ಮತ್ತು ಚಾಲಕನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ನಿವೇಶನಗಳಲ್ಲಿ ಗಿಡ ಗಂಟಿಗಳು ಬೆಳೆದಿರುವುದೇ ಅವಘಡಕ್ಕೆ ಕಾರಣವಾಗಿದ್ದು ಗಿಡಗಂಟಿಗಳು ದೊಡ್ಡದಾಗಿ ಬೆಳೆದಿರುವ ಕಾರಣ ತಿರುವು ರಸ್ತೆಗಳಲ್ಲಿ ಅಪಘಾತಗಳು ಸಾಮಾನ್ಯವಾಗುತ್ತಿವೆ. ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.