ಪೊಲೀಸ್ ಇಲಾಖೆಗೆ ನೂತನ ವಾಹನ

Vehicle
Published on

ಚಿತ್ರದುರ್ಗ: ಪೊಲೀಸ್ ಇಲಾಖೆಗೆ ಹೊಸದಾಗಿ ಮಂಜೂರಾದ 4 ಬುಲೆರೋ, 67 ದ್ವಿಚಕ್ರ ವಾಹನಗಳ ಗಸ್ತು ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಚಾಲನೆ ನೀಡಿದರು.

ಪೊಲೀಸ್ ಇಲಾಖೆಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಕ್ಕಾಗಿ ಹಂಚಿಕೆಯಾದ ವಾಹನಗಳಲ್ಲಿ 15 ವರ್ಷ ಸೇವೆ ಪೂರ್ಣಗೊಂಡ ವೆಹಿಕಲ್‌ಗಳನ್ನು ಹರಾಜು ಪ್ರಕ್ರಿಯೆ ಮೂಲಕ ನಿಷ್ಕ್ರಿಯಗೊಳಿಸಲಾಗಿದೆ.

ಹೀಗಾಗಿ ಇಲಾಖೆಗೆ ವಾಹನಗಳ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಸಚಿವರ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಗೆ ಹೊಸದಾಗಿ 4 ಮಹೀಂದ್ರಾ ಬುಲೆರೋ ನಿಯೋ ವಾಹನಗಳನ್ನು ಖರೀದಿಸಿದ್ದು, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರಿಗೆ ಸಚಿವರು ಹಸ್ತಾಂತರಿಸಿದರು.

ಐತಿಹಾಸಿಕ ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯದ ನಿಮಿತ್ತ 65 ದ್ವಿಚಕ್ರ ವಾಹನಗಳಿಗೆ ಲೈಟಿಂಗ್ ಹಾಗೂ ಸೈರನ್ ಸಿಸ್ಟಮ್ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಗಸ್ತು ಕರ್ತವ್ಯ ನಿರ್ವಹಿಸುವಂತೆ ಜನರೊಂದಿಗೆ ನಾವಿದ್ದೇವೆ ಎಂಬ ಆಶಾಭಾವನೆಯೊಂದಿಗೆ ಮನೋಸ್ಥೆರ್ಯ ತುಂಬುವ ಉದ್ದೇಶದಿಂದ ವಾಹನಗಳನ್ನು ನೀಡಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ರಾತ್ರಿ ಪಾಳಯದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ ಕಳ್ಳತನ ಪ್ರಕರಣ ತಡೆಗಟ್ಟುವಲ್ಲಿ ಸಹಾಯಕವಾಗುವಂತೆ ದ್ವಿಚಕ್ರ ವಾಹನಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ದಿನಕರ್, ಗಣೇಶ್, ನಗರಠಾಣೆ ವೃತ್ತ ನಿರೀಕ್ಷಕ ತಿಪ್ಪೇಸ್ವಾಮಿ, ಡಿಎಆರ್‌ನ ವೃತ್ತ ನಿರೀಕ್ಷಕರಾದ ರುದ್ರೇಶ್, ಯುವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net