

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಕೆಲ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣದಿಂದ ಜಾರಿ ಬರುವಂತೆ ವರ್ಗಾವಣೆ ಮಾಡಲಾಗಿದೆ. ಡೈರೆಕ್ಟರ್ ಜನರಲ್, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಉಮೇಶ್‌ಕುಮಾರ್ ಈ ಕುರಿತು ಸೋಮವಾರ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತದಲ್ಲಿದ್ದ ಡಿ. ಯೋಗೇಶ್ ಅವರನ್ನು ಮೈಸೂರಿನ ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆಗೆ, ಉದಯಗಿರಿ ಠಾಣೆಯ ಪಿ.ಕೆ.ರಾಜು ಅವರನ್ನು ಸಿಇಎನ್ ಠಾಣೆಗೆ, ತಲಕಾಡು ಠಾಣೆಯ ಎಲ್.ಅರುಣ್ ಅವರನ್ನು ಕುವೆಂಪುನಗರ ಠಾಣೆಗೆ, ಪಿಟಿಎಸ್ ಠಾಣೆಯ ಎಸ್.ನಾಗೇಶ್ ಅವರನ್ನು ನಗರದ ಮಂಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಅಂತೆಯೆ, ದೇವರಾಜ ಠಾಣೆಯ ಆರ್.ದಿವಾಕರ್ ಅವರನ್ನು ಮೇಟಗಳ್ಳಿ ಠಾಣೆಗೆ, ಸರಗೂರು ವೃತ್ತದ ಎನ್.ಆನಂದ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಠಾಣೆಗೆ, ಕುವೆಂಪುನಗರ ಠಾಣೆಯ ಕೆ. ಷಣ್ಮುಗವರ್ಮ ಅವರನ್ನು ಪಿಟಿಎಸ್ ಠಾಣೆಗೆ, ಸಿದ್ಧಾರ್ಥನಗರ ಸಂಚಾರ ಠಾಣೆಯ ಎಂ.ಆರ್. ನಟರಾಜ್ ಅವರನ್ನು ರಾಜ್ಯ ಗುಪ್ತವಾರ್ತೆಗೆ, ತಿ.ನರಸೀಪುರ ಠಾಣೆಯ ಎನ್.ಜಿ. ಕೃಷ್ಣಪ್ಪ ಅವರನ್ನು ಕೊಡುಗು ಜಿಲ್ಲೆಯ ಸಿಇಎಸ್ ಠಾಣೆಗೆ ಮತ್ತು ಮಂಡಿ ಠಾಣೆಯ ಕೆ.ಆರ್. ರಘು ಅವರನ್ನು ಮಂಡ್ಯ ಜಿಲ್ಲೆಯ ಡಿಎಸ್‌ಬಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.