ಪೊಲೀಸರಿಗೆ ಬೆನ್ನೆಲುಬಾಗಿರುವ ಗೃಹ ಇಲಾಖೆ

ಪಟ್ಟಣದಲ್ಲಿ ಗೃಹರಕ್ಷಕ ದಳದ ಕಚೇರಿಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಪೊಲೀಸ್ ಉಪ ಅಧೀಕ್ಷಕ ರವಿಪ್ರಸಾದ್, ಗೃಹರಕ್ಷಕ ದಳದ ಕಮಾಂಡೆಂಟ್ ಧರ್ಮೇಂದ್ರ, ಅಧೀಕ್ಷಕ ಯೋಗೇಶ್ ಮತ್ತಿತರರಿದ್ದರು.
ಫೋಟೋ ಶೀರ್ಷಿಕೆ 03 ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ: ಸಂಕಷ್ಟದ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿರುವ ಇಲಾಖೆ ಇದ್ದರೆ ಅದು ಗೃಹರಕ್ಷಕ ಇಲಾಖೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶ್ಲಾಘಿಸಿದರು.


ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಪಿಡಬ್ಲುೃಡಿ ಇಲಾಖೆಗೆ ಸೇರಿದ ಈ ಹಿಂದೆ ಸಂಚಾರ ಪೊಲೀಸ್ ಠಾಣೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದಲ್ಲಿ ಗೃಹರಕ್ಷಕ ದಳದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೃಹ ರಕ್ಷಕ ದಳ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹ ರಕ್ಷಕ ದಳದ ಕೊಡುಗೆ ಮಹತ್ತರವಾದುದ್ದು, ಪೊಲೀಸ್ ಇಲಾಖೆಗೆ ಅವಶ್ಯಕ ಸಂದರ್ಭದಲ್ಲಿ ಶಕ್ತಿಯ ರೀತಿ ಗೃಹ ರಕ್ಷಕ ದಳದವರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.


ಸಂಕಷ್ಟದಲ್ಲಿ ಅಥವಾ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಅವರ ಜತೆ ಕೈಜೋಡಿಸಿ ಅಚ್ಚುಕಟ್ಟಾಗಿ ಗೃಹ ರಕ್ಷಕ ದಳದವರು ಎಚ್ಚರಿಕೆಯಿಂದ ಕೆಲಸ ಮಾಡಿ ಸಮಾಜಕ್ಕೆ ಮೌಲ್ಯಯುತ ಸೇವೆ ನೀಡುತ್ತಿದ್ದಾರೆ. ಜವಾಬ್ದಾರಿ ಅರಿತು ನಡೆದುಕೊಳ್ಳುತ್ತಿರುವ ಗೃಹ ರಕ್ಷಕ ದಳದವರಿಗೆ ನಾವು ಸಹಕಾರ ನೀಡುತ್ತೇವೆ. ಕರ್ತವ್ಯದ ವೇಳೆ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಜತೆಗೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ಪಡೆಯುವ ಕೆಲಸಗಳನ್ನೇ ಮಾಡಬೇಕು ಎಂದರು.

ಗೃಹರಕ್ಷಕ ದಳದ ಕಮಾಂಡೆಂಟ್‌ಗಳು ಸಿಬ್ಬಂದಿ ಆಯ್ಕೆ ಮಾಡುವ ಸಂದರ್ಭದಲ್ಲಿ ದೈಹಿಕ ಸಾಮರ್ಥ್ಯವಿರುವ ಶಿಸ್ತು ಹಾಗೂ ಕೆಲಸದಲ್ಲಿ ಆಸಕ್ತಿ ಇರುವ 20ರಿಂದ 22 ವರ್ಷ ವಯೋಮಿತಿಯವರನ್ನು ಆಯ್ಕೆ ಮಾಡಿದಾಗ ಅವರಿಂದ 30 ವರ್ಷಗಳ ಕಾಲ ಸೇವೆ ಪಡೆಯಬಹುದು ಎಂದು ತಿಳಿಸಿದರು.


ಗೃಹರಕ್ಷಕ ದಳದ ಕಮಾಂಡೆಂಟ್ ಎಚ್.ಎಲ್.ಧರ್ಮೇಂದ್ರ ಅಧ್ಯಕ್ಷತೆ ವಹಿಸಿದ್ದರು.ಅಧೀಕ್ಷಕ ಕೆ.ಬಿ.ಯೋಗೇಶ್, ಸಹಾಯಕ ಬೋಧಕಿ ಹಾಜೀರ ಖಾನಂ, ಚನ್ನರಾಯಪಟ್ಟಣ ಘಟಕದ ಘಟಕಾಧಿಕಾರಿ ಸದಾಶಿವಯ್ಯ, ಪ್ಲಟೋನ್ ಕಮಾಂಡರ್ ಮಳಲಿ ಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್ ಮರಗೂರು, ತಹಸೀಲ್ದಾರ್ ಸಿ.ಜಿ.ಗೀತಾ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net