ಪೊಲೀಸರಿಗೆ ಫಿಟ್‌ನೆಸ್ ಇಂಪ್ಯೂವ್ ಮೆಂಟ್ ಶಿಬಿರ ಉದ್ಘಾಟನೆ

ಪೊಲೀಸರಿಗೆ ಫಿಟ್‌ನೆಸ್ ಇಂಪ್ಯೂವ್ ಮೆಂಟ್ ಶಿಬಿರ ಉದ್ಘಾಟನೆ
Published on

    ಹಾಸನ: ಪೊಲೀಸರು ದಿನದ 24 ಗಂಟೆಗಳು ಸೇವೆ ಸಂದರ್ಭದಲ್ಲಿ ನಾನಾ ಕಾಯಿಲೆಯಿಂದ ಬಳಲುತ್ತಾರೆ.ಈ ಹಿನ್ನೆಲೆಯಲ್ಲಿ ಅವರ ಆರೋಗ್ಯದ ದೃಷ್ಟಿಯಿಂದ ಮತ್ತು ದೈಹಿಕ ಸದೃಢತೆಯಿಂದ ಈ ಶಿವಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ತಾಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಒಂದು ತಿಂಗಳ ಫಿಟ್‌ನೆಸ್ ಇಂಪ್ಯೂವ್ ಮೆಂಟ್ ಶಿಬಿರವನ್ನ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಹೆಚ್ಚು ಕೆಲಸದ ಒತ್ತಡದಿಂದ ಅವರ ಆರೋಗ್ಯದ ಬಗ್ಗೆ ಅಷ್ಟು ಕಾಲೇಜು ವಹಿಸುವುದಿಲ್ಲ ಅಲ್ಲದೆ ಅವರಿಗೆ ಸರಿಯಾಗಿ ನಿದ್ದೆ, ಊಟ ಮಾಡದೆ ಹಲವು ಕಾಯಿಲೆಗಳಿಂದ ಬಳಲುತ್ತಾರೆ ಎಂದರು.

ಆದ್ದರಿಂದ ಮೊದಲ ಹಂತದಲ್ಲಿ 75 ಜನರಿಗೆ ಸಿಂಬ್ಬದಿಗಳಿಗೆ ಶಿಬಿರದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಇದರಲ್ಲಿ ಪ್ರತಿನಿತ್ಯ ಬೆಳಗ್ಗೆ 7ಯಿಂದ ಸಂಜೆ 7ವರೆಗೆ ವ್ಯಾಯಾಮ, ಯೋಗಾಭ್ಯಾಸ, ಜಿಮ್, ರೂಟ್ ಮಾರ್ಚ್ ಚಟುವಟಿಕೆಗಳು ಹಾಗೂ ಉತ್ತಮ ಆರೋಗ್ಯಕ್ಕಾಗಿ ನ್ಯೂಟ್ರಿಷಿಯನ್ ಒಳಗೊಂಡ ಮೊಳಕೆ ಕಾಳು, ಬೇಯಿಸಿದ ಮೊಟ್ಟೆ, ಸಿರಿಧಾನ್ಯ, ಗಂಜಿ,ರಾಗಿ ಮುದ್ದೆ ಸೇರಿದಂತೆ ಇನ್ನಿತರ ಪೌಷ್ಟಿಕಾಂಶ ಆಹಾರವನ್ನು ನೀಡಲಾಗುವುದು ಎಂದರು.

ಅಧಿಕ ಕೆಲಸದ ಒತ್ತಡದಿಂದ ನಮ್ಮ ಇಲಾಖೆಯಲ್ಲಿ ಹಲವು ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಹೆಚ್ಚು ಸಾವು ಸಂಭವಿಸುತ್ತಿದೆ ಆದ್ದರಿಂದ ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರು ದೈಹಿಕವಾಗಿ ಸದೃಢರಾಗಿರಬೇಕು ಆ ನಿಟ್ಟಿನಲ್ಲಿ ಅವರಿಗೆ ವಿಶೇಷ ತರಗತಿಯನ್ನು ಕೂಡ ಇಲ್ಲಿ ನೀಡಲಾಗುವುದು ಎಂದರು.

ಈ ಶಿಬಿರ ಒಂದು ತಿಂಗಳ ಕಾಲ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲಾ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಆರೋಗ್ಯ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಬೇಕು. ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ತಮ್ಮಯ್ಯ, ಉಪನ್ಯಾಸಕ ಕಿರಣ್, ಪತಂಜಲಿ ಯೋಗ ಸಮಿತಿಯ ಪ್ರಭಾರಿ ಸುರೇಶ್ ಪ್ರಜಾಪತಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪ್ರಮೋದ್, ಅರುಣ್ ಕುಮಾರ್, ರೇವಣ್ಣ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net