ಪೊಲೀಸರಿಗೆ ಧಮ್ಕಿ ಹಾಕಿದ ಹಲ್ಲೆ ಆರೋಪಿಯ ಸಂಬಂಧಿಕರು

Crime Logo
Published on

ಕಲಬುರಗಿ: ಬಂಧಿತ ಹಲ್ಲೆ ಆರೋಪಿಯನ್ನು ಬಿಡದಿದ್ದರೆ ನೋಡಿ ಎಂದು ಸಂಬAಧಿಕರು ಧಮ್ಕಿ ಹಾಕಿದ್ದು, ಪೊಲೀಸರು ಸ್ಥಳ ಮಹಜರು ಮಾಡುವುದನ್ನು ಕೈಬಿಟ್ಟು ವಾಪಸಾದ ಪ್ರಸಂಗ ಬುಧವಾರ ನಡೆದಿದೆ.

ನಗರದ ಎಂಎಸ್‌ಕೆ ಮಿಲ್ ಮಕ್ಕದಿ ಚೌಕ್‌ನ ರುಸ್ತುಮ್ ರಶೀದ್ ವಿರುದ್ಧ ಫೆ.೯ರಂದು ಹಲ್ಲೆ, ಜೀವಬೆದರಿಕೆ ಆರೋಪದಡಿ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ೧೧ರ ರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದು, ಈ ವೇಳೆ ತಂದೆ ಅಬ್ದುಲ್ ರಶೀದ್, ಸಹೋದರರು ಗಲಾಟೆ ಮಾಡಿದ್ದರು.

ಮರುದಿನ ಬೆಳಗ್ಗೆ ೬.೧೫ಕ್ಕೆ ರುಸ್ತುಮ್ ಕೃತ್ಯಕ್ಕೆ ಬಳಸಿದ ಚಾಕೂ ಬಚ್ಚಿಟ್ಟ ಸ್ಥಳ ತೋರಿಸುವುದಾಗಿ ಹೇಳಿದ್ದರಿಂದ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ರುಸ್ತುಮ್ ತಂದೆ, ಸಹೋದರರ, ಗೆಳೆಯರು ಬೈಕ್, ಕಾರ್‌ನಲ್ಲಿ ಬಂದು ಪೊಲೀಸರಿಗೆ ಧಮ್ಕಿ ಹಾಕಿದ್ದಲ್ಲದೆ ಆತನನ್ನು ಬಿಟ್ಟು ಬಿಡಿ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಪೇದೆಯನ್ನು ತಳ್ಳಿದ್ದಾರೆ. ನಂತರ ಮುಂದೆ ಸಾಗುವಾಗ ಜೀಪ್ ಮುಂದೆ ವಾಹನಗಳನ್ನು ನಿಲ್ಲಿಸಿದ್ದಲ್ಲದೆ ರುಸ್ತುಮ್‌ನ ಬಿಡದಿದ್ದರೆ ಏನು ಮಾಡುತ್ತೇವೆ ನೋಡಿ ಎಂದು ಆವಾಜ್ ಹಾಕಿದರು. ಸ್ಥಿತಿಯ ಸೂಕ್ಷö್ಮತೆ ಅರಿತ ಪೊಲೀಸರು ಮಹಜರು ಮಾಡದೆ ವಾಪಸ್ ತೆರಳಿದ್ದು, ಪಿಐ ಕುಬೇರ ರಾಯಮಾನೆ ದೂರು ಆಧರಿಸಿ ರಾಘವೇಂದ್ರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net