ಪೊಲೀಸರಿಗೂ ಪ್ರತಿಭಟನೆ ಹಕ್ಕಿರಲಿ

CTD 4 VIJAYASENE--04
Published on

ಚಿತ್ರದುರ್ಗ: ಪೊಲೀಸರಿಗೆ ಪ್ರತಿಭಟನೆ ಹಕ್ಕು ನೀಡುವಂತೆ ಒತ್ತಾಯಿಸಿ ಜಿಲ್ಲಾ ಕರುನಾಡ ವಿಜಯ ಸೇನೆ ಕಾರ‌್ಯಕರ್ತರು ಸೋಮವಾರ ಎಸ್‌ಪಿ ಕಚೇ ರಿ ಬಳಿ ಪ್ರತಿಭಟನೆ ನಡೆಸಿದರು.
ಕಾನೂನು ಪರಿಪಾಲಕರಾದ ಪೊಲೀಸರು ಮತ್ತು ವಕೀಲರ ನಡುವೆ ಉತ್ತಮ ಬಾಂಧವ್ಯವಿರಬೇಕು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಾತಾವರಣವನ್ನು ತಿಳಿಸಿಗೊಳಿಸುವಂತೆ ಒತ್ತಾಯಿಸಿ ಎಸ್‌ಪಿ ಧರ್ಮೆಂದರ್ ಕು ಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ಸಿ.ಜಗದೀಶ್, ಗೋಪಿನಾಥ, ಅಖಿಲೇಶ್, ಅವಿನಾಶ್, ಸುರೇಶ್, ಕಮಲ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net