

ಕಲಬುರಗಿ: ಕೋಟನೂರ (ಡಿ) ಗ್ರಾಮದಲ್ಲಿ ಜ.೨೨ರಂದು ನಡೆದಿದೆ ಎನ್ನಲಾದ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಪ್ರಕರಣದಲ್ಲಿ ನನ್ನ ಹೆಸರನ್ನು, ಆರೋಪಿಯಾದ ಸಂಗಮೇಶ ಪಾಟೀಲ್ ಬಾಯಿಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸಿ ಸಿಲುಕಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಪುತ್ಥಳಿಗೆ ಅವಮಾನ ಪ್ರಕರಣದಲ್ಲಿ ಸಂಗಮೇಶ ಪಾಟೀಲ್‌ನನ್ನು ಬಂಧಿಸಿದ್ದು, ವಿಚಾರಣೆ ವೇಳೆ `ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಹೆಸರು ಹೇಳು ಎಂದು ಪೊಲೀಸರು ಸಂಗಮೇಶ್‌ಗೆ ಕಿರುಕುಳ ನೀಡಿದ್ದಾರೆ. ಆತ ಒಪ್ಪದಿದ್ದಕ್ಕೆ ಹೊಡೆದಿದ್ದಾರೆ. ಆದರೂ ಸ್ವಾಮೀಜಿ ನನಗೆ ಗೊತ್ತಿಲ್ಲ ಎಂದಿದ್ದಾನೆ. ವಿನಾಕಾರಣ ನನ್ನನ್ನು ಪೊಲೀಸರು ಇದರಲ್ಲಿ ಸಿಲುಕಿಸಲು ಯತ್ನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೋಟನೂರ (ಡಿ) ಗ್ರಾಮದಲ್ಲಿನ ಸಂಗಮೇಶ ಪಾಟೀಲ್ ಮನೆ, ಕುಟುಂಬದವರ ಮೇಲೆ ಕೆಲ ಗುಂಡಾಗಳು ಅಮಾನವೀಯ ಹಲ್ಲೆ ನಡೆಸಿದ್ದರಿಂದ ಅವರ ಮನೆಗೆ ಇತ್ತೀಚೆಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ ಕುಲ್ಕರ್ಣಿ ಅವರೊಂದಿಗೆ ಭೇಟಿ ನೀಡಲು ಹೋಗಿz್ದÉÃವು. ಆ ವೇಳೆ ಸಂಗಮೇಶ ಪಾಟೀಲ್ ಪೊಲೀಸರು ನಡೆಸಿರುವ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ವೀರಶೈವ ಸಮಾಜದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ದುಷ್ಟ ಪೊಲೀಸರ ಜತೆಗೆ ಚಾರ್ಜ್ ಮಿನಿಸ್ಟರ್ ಇದ್ದಾರೆ. ಆಡಳಿತವನ್ನು ಪ್ರಶ್ನಿಸುವವರ ಧ್ವನಿ ಅಡಗಿಸಲಾಗುತ್ತಿದೆ. ವಿನಾಕಾರಣ ನನ್ನ ಹೆಸರು ಸಿಲುಕಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿ ರಾಜಣ್ಣ ವಿರುದ್ಧ ತನಿಖೆ ಆಗಬೇಕು, ಘಟನೆಯ ಆರಂಭದಿAದ ಇದುವರೆಗೆ ಎಸಿಪಿ ರಾಜಣ್ಣ ಅವರ ಫೋನ್ ಕರೆಗಳ ಸಿಡಿಆರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಕ್ಕೆ ಧೈರ್ಯವಿದ್ದರೆ, ತಪ್ಪು ಮಾಡಿದರೆ ಹಿಂಬಾಗಿಲ ಮೂಲಕ ಹಿಂದು, ಲಿಂಗಾಯತರಿಗೆ ಶಿಕ್ಷೆ ನೀಡುವುದು ಬಿಟ್ಟು, ವಿನಾಕಾರಣ ಹಿಂಬಾಗಿಲ ಮೂಲಕ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.
ಹುಲ್ಲೇಶ ಮದರಿ, ಮುದ್ಕಣ್ಣ ಇದ್ದರು.