

ಬೀದರ್: ವಿಧಾನಸಭೆ ಚುನಾವಣೆ ನಿಮಿತ್ತ ಪೊಲೀಸ್ರಿಂದ ನಗರದಲ್ಲಿ ಪಥ ಸಂಚಲನ ನಡೆಯಿತು.
ಸ್ಥಳೀಯ ಪೊಲೀಸ್ರೊಂದಿಗೆ ಅರೆಸೇನೆ ಪಡೆ ಯೋಧರು ಹೆಜ್ಜೆ ಹಾಕಿದರು. ಸಿದ್ಧಾರೂಢ ಮಠದಿಂದ ಆರಂಭವಾದ ಪಥ ಸಂಚಲನ ಚಿಟ್ಟಾ ಕ್ರಾಸ್, ಗುಂಪಾ ರಿಂಗ್ರೋಡ್, ಮೈಲೂರು ಮೂಲಕ ಚಿದ್ರಿ ವರೆಗೆ ನಡೆಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಮಹೇಶ ಮೇಘಣ್ಣನವರ್ ಮಾತನಾಡಿ, ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಡ್ಡಾಯ ಮತದಾನ ಮಾಡಬೇಕು. ಶಾಂತಿ, ಸುವ್ಯವಸ್ಥೆಯ ಹೊಣೆ ಪೊಲೀಸರು ಹೊತ್ತಿದ್ದಾರೆ. ಯಾವುದೇ ಭಯ ಇಲ್ಲದೆ ಜನ ಬಂದು ಹಕ್ಕು ಚಲಾಯಿಸಬೇಕು. ಜನರಲ್ಲಿ ಧೈರ್ಯ ಮೂಡಿಸುವುದಕ್ಕಾಗಿಯೇ ಈ ಪಥ ಸಂಚಲನ ನಡೆಸಲಾಗಿದೆ ಎಂದು ಹೇಳಿದರು.
ಡಿವೈಎಸ್ಪಿ ಕೆ.ಎಂ. ಸತೀಶ್, ಗಾಂಧಿಗಂಜ್ ಸಿಪಿಐ ಹನುಮರಡ್ಡಪ್ಪ, ನ್ಯೂ ಟೌನ್ ಸಿಪಿಐ ವೆಂಕಟೇಶ, ಕಪಿಲ್ದೇವ್, ಹುಲಯ್ಯ ರಾಠೋಡ್, ಶ್ರೀನಿವಾಸ ಅಲ್ಲಾಪುರ ಮತ್ತು ಸಿಬ್ಬಂದಿ ಇದ್ದರು.
ಪಥ ಸಂಚಲನ ಮಹೇಶ ನಗರಕ್ಕೆ ಬಂದಾಗ ಅರೆಸೇನಾ ಪಡೆ ಮತ್ತು ಪೊಲೀಸರ ಮೇಲೆ ಸ್ಥಳೀಯರು ಹೂ ಸುರಿದು ಸ್ವಾಗತಿಸಿದರು. ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ ಇತರರಿದ್ದರು.