ಪೊಲೀಸರಿಂದ ತಪ್ಪಿಸಿಕೊಂಡ, ಯಮನ ಪಾದ ಸೇರಿದ

images (2)
Published on

ಕಲಬುರಗಿ : ಪೊಲೀಸರಿಂದ ತಪ್ಪಿಸಲು ಹೋಗಿ ನಗರದ ಆಸ್ಪತ್ರೆಯ ಮೇಲಿಂದ ಜಿಗಿದು ಬಿದ್ದು ಬಂಧಿತನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿದೆ.
ಶೇಖ ಜಾವೇದ್ ಅಲಿಯಾಸ್ ಮುನ್ನಾ ಎಂಬಾತನೇ ದುರಂತ ಅಂತ್ಯ ಕಂಡವ. ಈತ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ. ಎಂಟು ತಿಂಗಳ ಹಿಂದೆ ಇತನ ಸಹೋದರ ನಗರದ ಪಬ್ಲಿಕ್ ಗಾರ್ಡನ್ ದಲ್ಲಿ ವ್ಯಕ್ತಿಯೊಬ್ಬರ ಮಾಡಿ ಮೊಬೈಲ್ ಕಿತ್ತುಕೊಂಡು ಓಡುವ ಭರಾಟೆ ಯಲ್ಲಿ ಜೆಡಿ ಎಸ್ ಕಚೇರಿಯ ಸಮೀಪದಲ್ಲಿ ಇರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಈಗ ಆತನ ಸಹೋದರ ಮುನ್ನಾ ಜನರ ಜಿಮ್ಸ್ ಆಸ್ಪತ್ರೆ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಕಳವು ಇನ್ನಿತರ ಕೇಸ್ ದಲ್ಲಿ
ಜಾಮೀನು ಪಡೆದು ನಂತರ ಕೋರ್ಟ್ ಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಆರೋಗ್ಯ ತಪಾಸಣೆ ಮಾಡಿಸಲು ಜಿಮ್ಸ್ ಆಸ್ಪತ್ರೆಗೆ ಪೊಲೀಸರು ಶುಕ್ರವಾರ ಕರೆದುಕೊಂಡು ಹೋಗಿದ್ದರು.

ವೈದ್ಯರು ತಪಾಸಣೆ ಮಾಡಿದ ಬಳಿಕ ಕೋವಿಡ್ ಟೆಸ್ಟ್ ಮಾಡಲು ಕರೊನಾ ವಾರ್ಡ್ವಕಡೆಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗುವಾಗ ಅವರಿಂದ ತಪ್ಪಿಸಿಕೊಂಡು ಓಡಲು ಶುರುವಿಟ್ಟಿದ್ದಾನೆ. ಆಸ್ಪತ್ರೆ ಮಹಡಿಯನ್ನು ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡ. ಬೆನ್ನಲ್ಲೇ ಜನರು ಆತನನ್ನು ಅಲ್ಲಿಯೇ ದಾಖಲಿಸಿದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಸ್ಥಳಕ್ಕೆ ಎಸಿಪಿ ಗಿರೀಶ ಎಸ್.ಬಿ., ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net