ಪೊಲೀಸರಿಂದ ಕಿರುಕುಳ ಆರೋಪ

23Jaggu6
ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಗೋಕಾಕನ ಬಗಲಿ ಕುಟುಂಬಸ್ಥರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಅಳಲು ತೋಡಿಕೊಂಡರು. ಕುಟುಂಬಸ್ಥರಾದ ಸಿದ್ಧಪ್ಪ ಬಬಲಿ ಹಾಗೂ ಇತರರಿದ್ದರು.
Published on

ಬೆಳಗಾವಿ: ಗೋಕಾಕ ಹೊರವಲಯದಲ್ಲಿ 2021ರ ಜೂನ್‌ನಲ್ಲಿ ನಡೆದ ವ್ಯಕ್ತಿಯ ಅನುಮಾನಾಸ್ಪದ ಕೊಲೆ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ತಳುಕು ಹಾಕಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೋಕಾಕ ನಗರದ ಬಬಲಿ ಕುಟುಂಬ ಸದಸ್ಯರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಅಳಲು ತೋಡಿಕೊಂಡರು. ಕೊಲೆ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲದಿದ್ದರೂ ನನ್ನ ಇಬ್ಬರು ಪುತ್ರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪ್ರಕರಣದಿಂದ ಪಾರು ಮಾಡಲು ಪೊಲೀಸರು ನಮ್ಮಿಂದ ಹಂತ, ಹಂತವಾಗಿ 15 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ನ್ಯಾಯ ಕೊಡಿಸುವಂತೆ ಕುಟುಂಬದ ಹಿರಿಯ ಸದಸ್ಯರಾದ ಸಿದ್ಧಪ್ಪ ಬಬಲಿ ಆಗ್ರಹಿಸಿದರು. ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net