ತುಮಕೂರು: ಹೆಲ್ಮೆಟ್ ಧರಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ತೆರಳುತ್ತಿದ್ದುದ್ದನ್ನು ಪ್ರಶ್ನಿಸಿದ ಪೊಲೀಸರನ್ನೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಕೆಳಗೆ ತಳ್ಳಿ ಬೀಳಿಸಿ ದುರ್ನಡತೆ ತೋರಿದ್ದ ನಾಲ್ವರನ್ನು ಬಂಧಿಸಲಾಗಿದೆ. ಸದಾಶಿವನಗರದ ನಿವಾಸಿಗಳಾದ ಮೊಹಮ್ಮದ್ ಇಸ್ಮಾಯಿಲ್ (20), ಮೊಹಮ್ಮದ್ ಅಬ್ಬಾಸ್ (21), ಅದ್ನಾನ್ ಅಹ್ಮದ್ (22), ಮೊಹಮ್ಮದ್ ಅಲಿ (19) ಬಂಧಿತರು. ಮಂಗಳವಾರ ಸಂಜೆ ರಿಂಗ್ ರಸ್ತೆಯಲ್ಲಿ ಬೈಕಿನಲ್ಲಿ ನಾಲ್ವರು ತೆರಳುತ್ತಿದ್ದುದನ್ನು ತಡೆದು ಪ್ರಶ್ನಿಸಿದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ನೂಕಿ ಕೆಳಗೆ ಬೀಳಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವಂತೆ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಾಲ್ವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು ಬೈಕ್ ವಶಕ್ಕೆ ಪಡೆಯಲಾಗಿದೆ.