ಪೊಲೀಸರ ಹಲ್ಲೆಗೆ ವಕೀಲರ ಸಂಘ ಖಂಡನೆ   -ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಕೆ

dvg-lawyers-protest-dec-1.jpg
Published on

ದಾವಣಗೆರೆ: ಚಿಕ್ಕಮಗಳೂರು ವಕೀಲ ಪ್ರೀತಂ ಅವರನ್ನು ಥಳಿಸಿದ ಅಲ್ಲಿನ ಪೊಲೀಸರ ವಿರುದ್ಧ್ದ ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘವು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದೆ.

ಗುರುವಾರ ಸಂಜೆ ವಕೀಲ ಪ್ರೀತಂ ಅವರನ್ನು ಪಿಎಸ್‌ಐ ಮಹೇಶ್ ಪೂಜಾರಿ ಹಾಗೂ ಇತರೆ 6 ಸಿಬ್ಬಂದಿ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ ಎಂದು ಸಂಘವು ಹೇಳಿದೆ. ಆರೋಪಿತ ಪೊಲೀಸರ ವಿರುದ್ಧ ಕ್ರಮವಾಗಬೇಕು. ವಕೀಲರ ಮೇಲೆ ಹಲ್ಲೆ ನಡೆಸುವ ಘಟನೆಗಳು ಮರುಕಳಿಸುವಂತೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಮಂಜುನಾಥ್, ವಕೀಲರಾದ ಎಂ.ಎನ್.ಆಂಜನೇಯ, ಸಿ.ಎಂ.ಚನ್ನಕೇಶವ, ಎಸ್.ಪರಮೇಶ್, ಬಿ.ಎಸ್.ಲಿಂಗರಾಜ್, ಎಂ.ಜಿ.ರಮೇಶ್, ಬಿ.ಎಂ.ಹನುಮಂತಪ್ಪ, ಎ.ಎಲ್.ಹಾಲೇಶ್, ಎಂ.ಶಂಕರ್‌ರಾವ್, ಅಣ್ಣಪ್ಪ, ಎಚ್.ಎಸ್.ಯೋಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net