ಪೊಲೀಸರ ಪಥ ಸಂಚಲನಕ್ಕೆ ಪುಷ್ಪಮಳೆಗೈದು ಸ್ವಾಗತ

Police
Published on

ಚಿತ್ರದುರ್ಗ: ಹಿಂದು ಮಹಾಗಣಪತಿ ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಶುಕ್ರವಾರ ಸಂಜೆ ಪೊಲೀಸರು ಪಥ ಸಂಚಲನ ನಡೆಸಿದರು. ಇದೇ ವೇಳೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪುಷ್ಪಮಳೆಗೈದು ಸ್ವಾಗತಿಸಿದರು.

ಮುರುಘಾರಾಜೇಂದ್ರ ಕ್ರೀಡಾಂಗಣದಿಂದ ಆರಂಭವಾದ ಪಥ ಸಂಚಲನ ಬಿ.ಡಿ.ರಸ್ತೆ, ಹೊಳಲ್ಕೆರೆ ರಸ್ತೆಯಲ್ಲಿ ಸಂಚರಿಸಿತು. ನಂತರ ವಿಸರ್ಜನೆಯಾಗುವ ಚಂದ್ರವಳ್ಳಿ ಕೆರೆ ಸಮೀಪದ ಬಾವಿಯವರೆಗೂ ಸಾಗಿ ಪುನಾ ಹಿಂದಿರುಗಿತು.

ಪೊಲೀಸ್ ಸರ್ಪಗಾವಲು: ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 3.5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. 10 ಕೆಎಸ್‌ಆರ್‌ಪಿ, 12 ಡಿಎಆರ್, 4 ಕ್ಯೂಆರ್‌ಟಿ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಐಜಿಪಿ, ಎಸ್ಪಿ, 6 ಎಎಸ್ಪಿ, 16 ಡಿವೈಎಸ್ಪಿ ಸೇರಿ ಇಲಾಖೆ ಅಧಿಕಾರಿಗಳು ಇರಲಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ನೇತೃತ್ವದಲ್ಲಿ ನಡೆದ ಪಥ ಸಂಚಲನಕ್ಕೆ ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದರು.

ಸಹಾಯವಾಣಿ ಸಂಪರ್ಕಿಸಿ: ಸಾರ್ವಜನಿಕರ ಅನುಕೂಲಕ್ಕಾಗಿ ಸೈಬರ್ ಅಪರಾಧ-1930, ಮಕ್ಕಳ ಸಹಾಯವಾಣಿ-1098, ಇಆರ್‌ಎಸ್‌ಎಸ್-112 ಕುರಿತು ಪ್ಲೇ ಕಾರ್ಡ್ ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net