ಪೊಲೀಸರ ಜತೆ ಸಾರ್ವಜನಿಕರು ಕೈಜೋಡಿಸಿ

26 ydg 02
Published on

ಯಾದಗಿರಿ: ಅಪರಾಧ ತಡೆಗೆ ಸಾರ್ವಜನಿಕರು ಪೊಲೀಸರ ಜತೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.

ನಗರದಲ್ಲಿ ಮನೆ ಮನೆಗೆ ಪೊಲೀಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅಪರಾಧ ನಡೆಯಬಾರದು. ಹೀಗಾಗಿ ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಿದಾಗ ಅವುಗಳನ್ನು ತಡೆಯಲು ಸಾಧ್ಯ. ಹೀಗಾಗಿ ಪೊಲೀಸ್ ತಂಡ ರಚನೆ ಮಾಡಿ ಪ್ರತಿ ಮನೆಗೆ ಹೋಗಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸುವ ಉz್ದೆÃಶ ಈ ಕರ‍್ಯಕ್ರಮದ್ದಾಗಿದೆ ಎಂದರು.

ಕಳೆದ ತಿಂಗಳು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಜಾರಿಗೊಳಿಸಿರುವ ಈ ಕಾರ್ಯಕ್ರಮ ನಿಮಿತ್ತ ಶನಿವಾರ ತಂಡದೊAದಿಗೆ ಲಕ್ಷಿö್ಮನಗರ, ಡಾ.ಅಂಬೇಡ್ಕರ್ ನಗರ ಮತ್ತು ಮಾತಾ ಮಾಣಿಕೇಶ್ವರಿ ಕಾಲನಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.

ಈಗಾಗಲೇ ಹಳ್ಳಿಗಳಲ್ಲಿ ಬಿಟ್ ಹೆಸರಿನಿಂದ ಇಂತಹ ಕೆಲಸ ಅನೇಕ ವರ್ಷಗಳಿಂದ ನಡೆದಿದೆ. ಕಳ್ಳತನ, ಗುಂಪು ಜಗಳ ಸೇರಿ ಯಾವುದೇ ಅಪರಾಧಗಳು ನಡೆಯಬಾರದು. ಮನೆ, ಬಡಾವಣೆಗಳಲ್ಲಿ ಜನರ ಸುರಕ್ಷಿತವಾಗಿ ಹೇಗೆ ಇರಬೇಕು. ಏನಾದರೂ ಘಟನೆ ಸಂಭವಿಸಿದಾಗ ಯಾರಿಗೆ, ಯಾವ ನಂ.ಗೆ ಸಂಪರ್ಕಿಸಬೇಕು ಹಾಗೂ ಮನೆಗಳಲ್ಲಿ ವಾಸ ಮಾಡುವವರ ಸಂಖ್ಯೆ ಹೀಗೆ ಎಲ್ಲವೂ ಈ ನಮ್ಮ ತಂಡ ಕೆಲಸ ಮಾಡಲಿದೆ ಎಂದರು.

ಬಡಾವಣೆಗಳಲ್ಲಿ ಎಲ್ಲರೂ ಒಂದಾಗಿರಬೇಕು. ಹಗಲು, ರಾತ್ರಿ ಎನ್ನದೆ ಜನರ ಸುರP್ಷÀತೆಗೆ ಪೊಲೀಸ್ ಜತೆ ಸಹಕರಿಸುವ ಮೂಲಕ ಅಪರಾಧ ತಡೆಯಬೇಕು ಎಂದು ಹೇಳಿದರು.

ಡಾ.ಅಂಬೇಡ್ಕರ್ ನಗರದ ದಲಿತ ಮುಖಂಡ ಮಲ್ಲಣ್ಣ ದಾಸನಕೇರಿ ಅವರ ಮನೆಯಲ್ಲಿ ಈ ಬಗ್ಗೆ ಜನರಿಗೆ ತಿಳಿಸುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚುವರಿ ಎಸ್‌ಪಿ ಧರಣೇಶ ಸೂಕ್ತ ಸಲಹೆ ನೀಡಿದರು. ಈ ವೇಳೆ ದಲಿತ ಮುಖಂಡರಾದ ಮಂಜು ದಾಸನಕೇರಿ, ವಿಷ್ಟು ಹತ್ತಿಕುಣಿ, ಹನುಮಂತ, ಶಿವಪ್ಪ, ಮಹಾದೇವ, ವಿಶ್ವನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net