

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಚನ ಸಾಹಿತ್ಯ ಪ್ರಚಾರಕ, ಸಾಹಿತಿ ಪ್ರೊ. ಜಿ.ಬಿ.ವೀರಭದ್ರಯ್ಯನವರ ಆಯ್ಕೆಯಾಗಿದ್ದಾರೆ.
ತಾಲೂಕು ಕಸಾಪ ಪದಾಧಿಕಾರಿಗಳ ಸಭೆ ಸರ್ವಾನುಮತದಿಂದ ಈ ಆಯ್ಕೆ ಮಾಡಿದೆ. ಮಾ. 8ರಂದು ತಾಲೂಕಿನ ವರೂರ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ.
ತಾಲೂಕು ಕಸಾಪ ಮತ್ತು ಜಿಲ್ಲಾ ಕಸಾಪ ಪದಾಧಿಕಾರಿಗಳು, ಸ್ಥಳಿಯ ಮುಖಂಡರು ಸೋಮವಾರ ಇಲ್ಲಿಯ ನಾಗಶೆಟ್ಟಿಕೊಪ್ಪದಲ್ಲಿರುವ ಜಿ.ಬಿ. ವೀರಭದ್ರಯ್ಯನವರ ಮನೆಗೆ ತೆರಳಿ ಅವರಿಗೆ ಗೌರವ ಸಲ್ಲಿಸಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವಂತೆ ಅಧಿಕೃತ ಆಮಂತ್ರಣ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಈ ಹಿಂದಿನ ಸಮ್ಮೇಳನವನ್ನು ಕುಮಾರವ್ಯಾಸನ ಜನ್ಮಸ್ಥಳ ಕೋಳಿವಾಡದಲ್ಲಿ ಅತ್ಯಂತ ಯಶಸ್ವಿಯಾಗಿ ಹಾಗೂ ಗ್ರಾಮೀಣ ಸೊಗಡಿನೊಂದಿಗೆ ನಡೆಸಲಾಗಿತ್ತು. ಈ ಭಾರಿ ಸಮ್ಮೇಳನವನ್ನು ವರೂರ ಗ್ರಾಮದಲ್ಲಿ ನಡೆಸುತ್ತಿದ್ದೇವೆೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪೊ›. ಕೆ.ಎಸ್.ಕೌಜಲಗಿ, ಗ್ರಾಮೀಣ ತಾಲೂಕು ಅಧ್ಯಕ್ಷ ಡಾ.ರಾಮು ಮೂಲಗಿ, ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಪತ್ತಾರ, ಪೊ›. ಕೆ.ಎ.ದೊಡ್ಡಮನಿ, ಗುರುನಗೌಡ ಭೀಮನಗೌದ್ರ, ಹಳಿಯಾಳಗೌಡ್ರ, ಸುರೇಶಗೌಡ ಪಾಟೀಲ, ಮಹಾದೇವ ಹುಡೇದ, ಬಿ.ಎಸ್.ಮಾಳವಾಡ, ಡಾ. ರಮೇಶ ಅಂಗಡಿ, ಇತರರು ಇದ್ದರು.
EndFragment