

ಬಾಳೆಹೊನ್ನೂರು: ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಪೈಶಾಚಿಕ ಕೃತ್ಯ. ಉಗ್ರರನ್ನು ಸೆರೆಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಒತ್ತಾಯಿಸಿದರು.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಮತಪಟ್ಟವರಿಗೆ ಹಾಗೂ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಪಟ್ಟಣದ ಬಿ.ಕಣಬೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ದೇಶದಲ್ಲಿ ಭಯೋತ್ಪಾದಕರನ್ನು ಉಳಿಸಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಉಗ್ರ ಕತ್ಯವನ್ನು ಯಾರೂ ಬೆಂಬಲಿಸಲು ಸಾಧ್ಯವಿಲ್ಲ. ಅಮಾನವೀಯವಾಗಿ ಭಾರತೀಯರನ್ನು ಕೊಂದ ಉಗ್ರರನ್ನು ಕೇಂದ್ರ ಸರ್ಕಾರ ಮಟ್ಟ ಹಾಕಬೇಕಿದೆ ಎಂದರು.
ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ. ಸರಳ, ಸಜ್ಜನಿಕೆ, ನೇರ ನಡೆ ನುಡಿಯ ಅವರ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ. ರಾಮಯ್ಯ ಸಚಿವರಾಗಿ ಮಾಡಿದ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಇಂಥ ಅಪರೂಪದ ರಾಜಕಾರಣಿಗಳು ಮಲೆನಾಡಿನಲ್ಲಿ ಮತ್ತೆ ಹುಟ್ಟಬೇಕಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ವಿ.ರಂಜಿತಾ, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಸದಸ್ಯರಾದ ಎಂ.ಎಸ್.ಅರುಣೇಶ್, ಸದಾಶಿವ, ಬಿ.ಕೆ.ಮಧುಸೂದನ್, ಮಹಮ್ಮದ್ ಜುಹೇಬ್, ಮಹೇಶ್ ಆಚಾರ್ಯ, ಶಶಿಕಲಾ, ಮಹೇಶ್, ಕೋಕಿಲ, ಸರಿತಾ, ಶೇಖರ್, ಶಿವಪ್ಪ, ಫಿಲೋಮಿನಾ, ರಶ್ಮಿ, ಸಿಸಿಲಿಯಾ, ಪ್ರತಿಮಾ, ಕವಿತಾ, ಜಯಂತಿ, ಸಂತೋಷ್‌ಕುಮಾರ್, ಪ್ರಭಾಕರ್, ಜಗದೀಶ್ಚಂದ್ರ ಇತರರಿದ್ದರು.