ಪೈಪ್​ಲೈನ್ ಅವ್ಯವಸ್ಥೆ, ನೀರಿಗಾಗಿ ಪರದಾಟ

09 rtl 01
Published on

ರಟ್ಟಿಹಳ್ಳಿ: ಪೈಪ್​ಲೈನ್ ಅವ್ಯವಸ್ಥೆಯಿಂದಾಗಿ ತಾಲೂಕಿನ ಹಿರೇಕಬ್ಬಾರ ಗ್ರಾಮದ ಹರಿಜನರ ಓಣಿಯಲ್ಲಿ 3-4 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಹಿರೇಕಬ್ಬಾರ ಗ್ರಾಮವು ಬೈರಂಪಾದದ ಬಹುಗ್ರಾಮ ಕುಡಿಯುವ ನದಿ ನೀರು ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಎರಡು ಟ್ಯಾಂಕ್ ನಿರ್ವಿುಸಿದ್ದು, ಹರಿಜನರ ಓಣಿಯೊಂದನ್ನು ಬಿಟ್ಟು ಎಲ್ಲೆಡೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆ.

ಹರಿಜನರ ಓಣಿಯಲ್ಲಿ ಅಂದಾಜು 170 ಕುಟುಂಬಗಳು ವಾಸವಾಗಿವೆ. ಓಣಿಗೆ ಅಳವಡಿಸಿರುವ ಪೈಪ್​ಲೈನ್ ಹಾಳಾಗಿದೆ. ಹೀಗಾಗಿ ಓಣಿಯ ಜನ ನೀರಿಗಾಗಿ ಅಕ್ಕಪಕ್ಕದ ಬೀದಿಗಳಿಗೆ ಹೋಗಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಹಿರೇಕಬ್ಬಾರ ಗ್ರಾಮದ ಹರಿಜನರ ಓಣಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿಲ. ಆದರೂ, ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಸಮಗ್ರ ಮಾಹಿತಿ ಪಡೆದು ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು. | ವಿಷ್ಣುಕಾಂತ ಜಂಜೀರ, ಸಹಾಯಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಗ್ರಾಮಸ್ಥರು ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರವಾಣಿಗೆ ಮೂಲಕ ತಿಳಿಸಿದ್ದರು. ಅಲ್ಲಿನ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಲು ಪಿಡಿಒಗೆ ತಿಳಿಸಲಾಗಿದೆ. ಶೀಘ್ರವೇ ಅಲ್ಲಿ ನೀರು ಪೂರೈಸುವಂತೆ ಸೂಚಿಸಲಾಗುವುದು. | ಕೆ.ಸಿ. ಮೋಹನಕುಮಾರ, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net