ಪೈಪ್‌ಲೈನ್‌ಗೆ ಮಂಜೂರಾತಿ ಸಿಗುವ ಭರವಸೆ

6 BYD 1
Published on

ಬ್ಯಾಡಗಿ: ಗುಡ್ಡದಮಲ್ಲಾಪುರ ಏತ ನೀರಾವರಿ ಪೈಪ್‌ಲೈನ್ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ಸಿಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಸರ್ಕಾರಿ ಪಿಯು ಕಾಲೇಜು ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. 20 ವರ್ಷಗಳ ಹಿಂದೆ ಮಂಜೂರಾದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಕಾಲುವೆ ಶಿಥಿಲಗೊಂಡಿವೆ. ಎಲ್ಲ ಕೆರೆಗಳಿಗೆ ಸಕಾಲಕ್ಕೆ ನೀರು ಹರಿಸುವುದು ಕಷ್ಟಸಾಧ್ಯವಾಗಿದೆ. 115 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸಲು ಡಿಪಿಆರ್ ಪ್ರಸ್ತಾವನೆಗೆ ಮುಂದಿನ ಸಂಪುಟ ಸಭೆಯಲ್ಲಿ ಮಂಜೂರಾತಿ ಸಿಗಲಿದೆ. ಲಿಂ.ಗುಬ್ಬಿ ಅಜ್ಜಯ್ಯನವರ ಹೊಂಡದ ಅಭಿವೃದ್ಧಿಗೆ 1.5 ಕೋಟಿ ರೂ. ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಎಂದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಜಂಗಮರೊಬ್ಬರ ಜಮೀನು ನೀಡಿದ್ದರು. ಬದಲಾಗಿ ಬೇರೆ ಕಡೆಗೆ ಜಮೀನು ನೀಡುವ ಸಮಸ್ಯೆ 25 ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಜಿಲ್ಲಾಧಿಕಾರಿ ಹಾಗೂ ಅಕ್ರಮ-ಸಕ್ರಮ ಸಮಿತಿ ಸದಸ್ಯರ ಸಹಕಾರದಿಂದ ಅವರಿಗೆ ನ್ಯಾಯ ಸಿಕ್ಕಿದೆ. ನೂತನ ಸರ್ಕಾರಿ ಕಾಲೇಜಗೆ 2 ಎಕರೆ ಭೂದಾನ ಮಾಡಲು ಗ್ರಾಮಸ್ಥರು ಮುಂದಾದಲ್ಲಿ ಅವರ ಹೆಸರನ್ನು ಕಾಲೇಜಿಗೆ ನಾಮಕರಣ ಮಾಡಲಾಗುವುದು ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರಂಭವಾಗಿದ್ದ ಕಾಲೇಜು, ವಿದ್ಯಾರ್ಥಿಗಳ ಕೊರತೆಯಿಂದ ಹಿರೇಹಳ್ಳಿಗೆ ಸ್ಥಳಾಂತರವಾಗಿದೆ. ಸದ್ಯ 12 ವಿದ್ಯಾರ್ಥಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಹೊಂದಬೇಕು ಎಂದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋಧಾ ವಂಟಗೋಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ ಶಾಸೀ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ಬಿಇಒ ಎಸ್.ಜಿ. ಕೋಟಿ, ಪ್ರಾಚಾರ್ಯ ಮಾಲತೇಶ ಬಂಡೆಪ್ಪನವರ, ಗ್ರಾಮಸ್ಥರಾದ ಕೊಟ್ರಯ್ಯ ಹಿರೇಮಠ, ಸುರೇಶಗೌಡ್ರ ಪಾಟೀಲ, ದಾನಪ್ಪ ಚೂರಿ, ಎನ್.ಎ್.ಹರಿಜನ, ಶಿವನಗೌಡ್ರ ವೀರನಗೌಡ್ರ, ಶಿವರಾಯ ಕಾಶಂಬಿ, ಬಸವರಾಜ ಬೆಳ್ಳಿಕಟ್ಟೆ, ಮಾರುತಿ ಅಚ್ಚೀಗೇರಿ, ರುದ್ರಪ್ಪ ಹೊಂಕಣ, ಮಂಜುನಗೌಡ್ರ ಲಿಂಗನಗೌಡ್ರ, ಬಿ.ಎಂ. ಗೌರಾಪುರ, ಎನ್.ಎಂ. ಹುಬ್ಬಳ್ಳಿ, ಬಸವರಾಜಪ್ಪ ಬನ್ನಿಹಳ್ಳಿ, ಆನಂದ ಮುದುಕಮ್ಮನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net