ಪೈಪ್‌ಲೈನ್ ದುರಸ್ತಿ ಕಾಮಗಾರಿಗೆ ಕ್ರಮ

Untitled design (1)
Published on

ಸಿರಿಗೇರಿ: ಇಲ್ಲಿನ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷೆ ಹೊಲಗುಂದಿ ಲಕ್ಷ್ಮೀ ಅಧ್ಯಕ್ಷತೆಯಲ್ಲಿ ತುರ್ತು ಗ್ರಾಮಸಭೆ ನಡೆಯಿತು.

ಗ್ರಾಪಂ ಪಿಡಿಒ ರಾಮಪ್ಪ ಉಪ್ಪಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಅಂಗನವಾಡಿ, ಶಾಲೆಗಳು, ಸ್ಮಶಾನ ರಸ್ತೆ, ಚರಂಡಿ, ಕೆರೆ, ಬಾವಿ ದುರಸ್ತಿ ಸೇರಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು. ಸದಸ್ಯರೊಂದಿಗೆ ಚರ್ಚಿಸಿದಂತೆ ಒಟ್ಟು ಎಂಟು ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಒದಗಿಸಲಾಗಿದೆ. ಸ್ಮಶಾನ , ಪೈಪ್ ಲೈನ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.

ಪ್ರಮುಖರಾದ ಕುಂಬಾರ ದ್ಯಾವಣ್ಣ, ಹಳ್ಳಿ ಮರದ ವೀರೇಶ, ಎನ್.ನಾಗನಾಥಪ್ಪ, ನಾಗರಾಜ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ ರುದ್ರೇಶ ಹಾಗೂ ಫಯಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net