

ಮೈಸೂರು: ಯಾರು ಪೇಮೆಂಟ್ ಕೊಡುತ್ತಾರೋ ಅಲ್ಲಿ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಇರುತ್ತಾರೆ ಎಂದು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸಖನನ್ನು ಹುಡುಕಿಕೊಂಡು ಹೋಗುತ್ತಾರೆಂದು ಜರಿದಿದ್ದ ವಿಶ್ವನಾಥ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದ ಅವರು, ಕಾಂಗ್ರೆಸ್‌ನಲ್ಲಿದ್ದಾಗ ಪಕ್ಷವೇ ನಮ್ಮ ತಂದೆ-ತಾಯಿ ಹೇಳುತ್ತಿದ್ದ ವಿಶ್ವನಾಥ್, 30 ವರ್ಷಕ್ಕೆ ಡೈವೋರ್ಸ್ ಕೊಟ್ಟು ಬಂದರು.
ಕೆಲವರು ಬೇಡ ಅಂದರೂ ನಾವು ಕರೆದುಕೊಂಡು ಬಂದೆವು. ಬಹಿರಂಗವಾಗಿ ಕೂಡಾವಳಿ ಮಾಡಿಕೊಂಡರೂ ಒಂದು ವರ್ಷಕ್ಕೆ ಡೈವೋರ್ಸ್ ಕೊಟ್ಟರು. ಈಗ ಯಾರು ಪೇಮೆಂಟ್ ಕೊಡ್ತಾರೋ ಅಲ್ಲಿ ಇರುತ್ತಾರೆ. ಅಲ್ಲಿಗೆ ಸಖ ಯಾರು ಎನಸ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಜರಿದರು.