ಪೇಟೆಕೆರೆ ಭೈರವೇಶ್ವರ, ಬಂಡಿ ಚೌಡೇಶ್ವರಿ ಸುಗ್ಗಿಹಬ್ಬ

bhr suggi
ಬಾಳೆಹೊನ್ನೂರು ಪೇಟೆಕೆರೆ ಭೈರವೇಶ್ವರ ಮತ್ತು ಬಂಡಿ ಚೌಡೇಶ್ವರಿ ಪರಿವಾರ ದೇವರ ಸುಗ್ಗಿಹಬ್ಬದ ಮೆರವಣಿಗೆ ನಡೆಯಿತು.
Published on

ಬಾಳೆಹೊನ್ನೂರು: ಪಟ್ಟಣದ ಪೇಟೆಕೆರೆ ಭೈರವೇಶ್ವರ, ಮಾಸ್ತಮ್ಮ ಹಾಗೂ ಬಂಡಿಚೌಡೇಶ್ವರಿ ಅಮ್ಮನವರ ಹಾಗೂ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬ ವಿಜೃಂಭಣೆಯಿಂದ ಗುರುವಾರ ನಡೆಯಿತು.

ಭಾನುವಾರ ಆರಂಭಗೊಂಡ ಭೈರವೇಶ್ವರ, ಮಾಸ್ತಮ್ಮ, ಮಣಬೂರು ಚೌಡಿ, ಬೆಳ್ಳಿಕಟ್ಟೆ ಚೌಡಿ, ಬಂಡಿ ಚೌಡೇಶ್ವರಿ, ಚಿಕ್ಕಮ್ಮ, ದೊಡ್ಡಮ್ಮ ದೇವರು, ನಾಗರ ಮಾದಗಿರಿ ಚೌಡಿ, ಉರಿ ಚೌಡಿ, ಜಟ್ಟಿಗ, ಕೆಂಚರ ಹುಲಿಚೌಡಿ ದೇವರುಗಳ ಸುಗ್ಗಿ ಹಬ್ಬದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಸುಗ್ಗಿ ಹಬ್ಬದ ಪ್ರಯುಕ್ತ ಒಂದು ವಾರಕ್ಕೂ ಮೊದಲೆ ಚೌತ (ವ್ರತ) ಪ್ರಾರಂಭಿಸಿದ ಗ್ರಾಮಸ್ಥರು ವಿವಿಧ ವಾದ್ಯಗೋಷ್ಠಿಗೆ ಸಂಭ್ರಮದಿಂದ ಸುಗ್ಗಿ ಕುಣಿದು ಸಂಭ್ರಮಿಸಿದರು. ಗುರುವಾರ ದೇವರ ಉತ್ಸವ ಮೂರ್ತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಭದ್ರಾ ನದಿಗೆ ತೆರಳಿ ಗಂಗೆ ಪೂಜೆ ಮಾಡಿ ಗಂಗೆಯನ್ನು ದೇವಸ್ಥಾನಕ್ಕೆ ತಂದು ಸುಗ್ಗಿಗದ್ದೆಯಲ್ಲಿ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಹರಕೆ, ದರ್ಶನ ಹಾಗೂ ಪಾತ್ರಿಯಿಂದ ಹೇಳಿಕೆ ಕೇಳಿಕೆ ನಡೆಯಿತು. ಸುಗ್ಗಿ ಹಬ್ಬದಲ್ಲಿ ಹಲಸೂರು, ಕಡ್ಲೇಮಕ್ಕಿ, ಬೈರನಮಕ್ಕಿ, ಹುಯಿಗೆರೆ, ಬನ್ನೂರು, ಮೆಣಸುಕುಡಿಗೆ ಕಾಲನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net