ಪೇಜಾವರ ಶ್ರೀ ಹೇಳಿಕೆಗೆ ಖಂಡನೆ

Arjun Bhadre
Published on

ಕಲಬುರಗಿ: ಡಾ.ಬಿ.ಆರ್.ಅಂಬೇಡರ್ ರಚಿಸಿದ ಸಂವಿಧಾನ ಸಾಮಾಜಿಕ ನ್ಯಾಯ ಕಲ್ಪಿಸುತ್ತಿದ್ದರೂ ಸಹ ನಮಗೆ ಗೌರವ ಸಿಗುತ್ತಿಲ್ಲ ಎಂಬ ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನತೀರ್ಥರ ಹೇಳಿಕೆಯನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ಖಂಡಿಸಿದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರÈವನ್ನು ಸಂವಿಧಾನ ಸ್ವಾಮೀಜಿಯವರಿಗೆ ನೀಡಿದೆ. ಈ ಹೇಳಿಕೆ ಮೂಲಕ ಪರೋಕ್ಷವಾಗಿ ಸಂವಿಧಾನ ಬದಲಾವಣೆಗೆ ಆಗ್ರಹಿಸಿ, ದೇಶದ ಕಾನೂನು ವ್ಯವಸ್ಥೆಗೆ ಅಗೌರವ ತೋರಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಪಂಕ್ತಿ ಬೇಧ, ಶೋಷಣೆ, ದಲಿತರ ದೌರ್ಜನ್ಯ ನಡೆಸುತ್ತಲೇ ಬಂದಿರುವ ಮನಸ್ಥಿತಿಯ ಸ್ವಾಮೀಜಿಯವರಿಗೆ ದಲಿತರು, ಹಿಂದುಳಿದವರು, ಬಡವರ ಏಳಿಗೆ, ಪ್ರಗತಿ ಸಹಿಸಲು ಆಗದೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಕ್ರಮಕ್ಕೆ ಆಗ್ರಹಿಸಿ, ಡಿ.೨ರಂದು ಬೆಂಗಳೂರಿಗೆ ನಿಯೋಗದೊಂದಿಗೆ ತೆರಳಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ, ಪರಶುರಾಮ ಯಡ್ರಾಮಿ, ಅಜೀಜ್‌ಸಾಬ್ ಐಕೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net