ಪೆಂಡಾಲ್, ಶಾಮಿಯಾನ ಉದ್ಯೋಗಿಗಳನ್ನು ಅಸಂಘಟಿತ ವಲಯಕ್ಕೆ: ಶಾಸಕ ಟಿ.ಎಸ್.ಶ್ರೀವತ್ಸ ಭರವಸೆ

7
Published on

ಮೈಸೂರು: ಪೆಂಡಾಲ್, ಶಾಮಿಯಾನ, ಸೌಂಡ್ಸ್ ಮತ್ತು ಲೈಟಿಂಗ್ಸ್ ಉದ್ಯೋಗಿಗಳನ್ನು ಅಸಂಘಟಿತ ವಲಯಕ್ಕೆ ಸೇರಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ಶಾಸಕ ಟಿ.ಎಸ್.ಶ್ರೀವತ್ಸ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಶಾಮಿಂಾನ ಡೆಕೋರೇಟರ್ಸ್‌, ಧ್ವನಿ ಮತ್ತು ಕ್ಷೇವಾಭಿವೃದ್ಧಿ ಸಂಘ, ಆಲ್ ಇಂಡಿಂಾ ಟೆಂಟ್ ಆ್ಯಂಡ್ ಡೆಕೋರೇಟರ್ಸ್‌ ವೆಲ್‌ೇರ್ ಅಸೋಸಿಯೇಷನ್, ಮೈಸೂರು ಜಿಲ್ಲಾ ಪೆಂಡಾಲ್ ವಾಲೀಕರ ಸಂಘದಿಂದ ನಗರದ ವಸ್ತು ಪ್ರದರ್ಶನ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ 3ನೇ ಮಹಾ ಅಧಿವೇಶನ ‘ಮೈಸೂರು ವೈಭವ’ವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಅಸಂಘಟಿತ ವಲಂುದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮೂಲಕ ಸಾಕಷ್ಟು ಂೋಜನೆಗಳನ್ನು ರೂಪಿಸಲಾಗಿದ್ದು, ಸಾಕಷ್ಟು ಅನುದಾನ ನೀಡಲಾಗಿದೆ. ಹಾಗಾಗಿ ಶಾಮಿಂಾನ, ಡೆಕೋರೇಷನ್ಸ್, ಸೌಂಡ್ಸ್, ಲೈಟಿಂಗ್ಸ್ ಮಳಿಗೆ ವಾಲೀಕರು ಮತ್ತು ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಡಿ ಗುರುತಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ವಾಡಲಾಗುವುದು ಎಂದು ಹೇಳಿದರು.
ಂಾವುದೇ ಸಭೆ ಸವಾರಂಭವಿರಲಿ, ಅದು ಕಳೆಗಟ್ಟಬೇಕಾದಲ್ಲಿ ಶಾಮಿಂಾನ ಹಾಗೂ ಡೆಕೋರೇಷನ್ ಮುಖ್ಯ. ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವವರನ್ನು ಸರ್ಕಾರ ಗುರುತಿಸುತ್ತಿಲ್ಲದಿರುವುದು ನೋವಿನ ಸಂಗತಿ. ನಿಮ್ಮನ್ನು ಕಾರ್ಮಿಕ ಇಲಾಖೆಯಡಿ ಬರುವಂತೆ ವಾಡಿದಲ್ಲಿ ಅನೇಕ ಸೌಲಭ್ಯಗಳು ಸಿಗಲಿವೆ ಎಂದು ಹೇಳಿದರು.
ದೇಶದ ಹಲವು ರಾಜ್ಯಗಳಿಂದ ವ್ಯಾಪಾರಸ್ಥರನ್ನು ಕರೆಸಿ ವಸ್ತುಪ್ರದರ್ಶನ ಹಾಗೂ ವಾರಾಟ ವ್ಯವಸ್ಥೆ ವಾಡಿರುವುದು ಉತ್ತಮ ಕಾರ್ಯ. ಶಾಮಿಂಾನ ವಾಲೀಕರು ಇದರ ಸದುಪಂೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧಿವೇಶನ ಉದ್ಘಾಟಿಸಿ ವಾತನಾಡಿದ ಮೇಯರ್ ಶಿವಕುವಾರ್, ಶಾಮಿಂಾನ ಹಾಗೂ ಅಲಂಕಾರಿಕ ಪೆಂಡಾಲ್ ಹಾಕುವವರ ಜೀವನ ಹೇಗೆ ಸಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಸಾವಾಜಿಕವಾಗಿ ಮುಂದೆ ತರಲು ಸರ್ಕಾರ ಕಾಂರ್ುಕ್ರಮ ರೂಪಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಶಾಮಿಂಾನ ಡೆಕೋರೇಟರ್ಸ್‌, ಧ್ವನಿ ಮತ್ತು ಕ್ಷೇವಾಭಿವೃದ್ಧಿ ಸಂಘದ ಅಧ್ಯಕ್ಷ ಮೆಹಬೂಬ್ ಮುಲ್ಲಾ ಮಾತನಾಡಿ, ಸರ್ಕಾರ, ಖಾಸಗಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ರೂಪಿಸಲು ಟೆಂಟ್, ಶಾಮಿಂಾನ ಹಾಕುತ್ತೇವೆ. ಆದರೆ ಂಾವ ಇಲಾಖೆಯೂ ನಮ್ಮನ್ನು ಪರಿಗಣಿಸಿಲ್ಲ. ಅಸಂಘಟಿತ ವಲಯಕ್ಕೆ ಸರ್ಕಾರ ಸೌಲಭ್ಯ ನೀಡಿದರೂ ಆ ಸವಲತ್ತುಗಳು ನಮ್ಮ ಕಾರ್ಮಿಕರಿಗೆ ಸಿಗುತ್ತಿಲ್ಲ ಎಂದರು.
ಕರ್ನಾಟಕ ರಾಜ್ಯ ಶಾಮಿಂಾನ ಡೆಕೋರೇಟರ್ಸ್‌, ಧ್ವನಿ ಮತ್ತು ಕ್ಷೇವಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ್, ಮೈಸೂರು ಜಿಲ್ಲಾ ಪೆಂಡಾಲ್ ವಾಲೀಕರ ಸಂಘದ ಅಧ್ಯಕ್ಷ ಶಿವಕುವಾರ್, ಉಪಾಧ್ಯಕ್ಷ ಅಬ್ದುಲ್ ರೆಹವಾನ್, ಪ್ರಧಾನ ಕಾಂರ್ುದರ್ಶಿ ಎನ್.ಮಂಜುನಾಥ್, ಆಯೋಜಕರಾದ ಮೋಹನ್ ಸೇಠ್, ರವಿ ಜಿಂದಾಲ್, ಅನಿಲ್ ರಾವ್, ಗುಂಡಂ್ಯುಸ್ವಾಮಿ, ಲಿಂಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net