ವೇಮನ ಜಯಂತಿ 19ರಂದು

Vemana
Published on

ಯಾದಗಿರಿ: ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 19ರಂದು ಬೆಳಗ್ಗೆ 11ಕ್ಕೆ ಯಾದಗಿರಿ ನಗರದ ಜಿಲ್ಲಾಡಳಿತ ಭವನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಸಕರ್ಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ವೇಮನ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ಹೊಸ ತಾಲೂಕುಗಳು ಸೇರಿದಂತೆ ತಾಲೂಕು ಮಟ್ಟದಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಆಯಾ ತಹಸೀಲ್ದಾರರು ಕ್ರಮ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಮಾಜದ ಮುಖಂಡರಾದ ರಾಚನಗೌಡ ಮುದ್ನಾಳ, ಶರಣಗೌಡ ಪೊಲೀಸ್ ಪಾಟೀಲ್, ವೈಜನಾಥ ಪಾಟೀಲ್ ಹತ್ತಿಕುಣಿ, ರಘುನಾಥರೆಡ್ಡಿ ಪಾಟೀಲ್, ಸುಭಾಸ್ರೆಡ್ಡಿ ಮದಿನಿ ಯಡ್ಡಳ್ಳಿ, ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರ, ಲಿಂಗಾರೆಡ್ಡಿ ಯಡ್ಡಳ್ಳಿ, ಮಲ್ಲನಗೌಡ ಹಳಿಮನಿ ಕೌಳೂರು, ರಮೇಶರೆಡ್ಡಿ ದೊಡ್ಡಮನಿ, ಡಾ.ಸಿದ್ಧರಾಜರೆಡ್ಡಿ, ಶಿವನಗೌಡ ಗುಳಬಾಳ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net