ಪೂರ್ಣಿಮಾ-ಶ್ರೀನಿವಾಸ್‌ಗೆ ಅದ್ದೂರಿ ಸ್ವಾಗತ

Congress
Published on

ಚಿತ್ರದುರ್ಗ: ಕಾಂಗ್ರೆಸ್ ಸೇರ್ಪಡೆ ಬಳಿಕ ಮೊದಲ ಬಾರಿ ಪಕ್ಷದ ಜಿಲ್ಲಾ ಕಚೇರಿಗೆ ಶನಿವಾರ ಆಗಮಿಸಿದ ಮಾಜಿ ಶಾಸಕಿ ಪೂರ್ಣಿಮಾ, ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಕಾರ್ಯಕರ್ತರು, ಅಭಿಮಾನಿಗಳು ಹೂ ಮಳೆಗೈದು ಅದ್ದೂರಿಯಾಗಿ ಸ್ವಾಗತಿಸಿದರು.

ಕಾರ್ಯಕರ್ತರ ಸಭೆಯಲ್ಲಿ ಪೂರ್ಣಿಮಾ ಮಾತನಾಡಿ, ಹಿರಿಯ ಕಾಂಗ್ರೆಸ್ ನಾಯಕರು ನನ್ನ ತಂದೆಯನ್ನು ಈಗಲೂ ಸ್ಮರಿಸುತ್ತಾರೆ. ಇದೇ ಕಾರಣಕ್ಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಅಳಕು ಇತ್ತು. ಆದರೆ, ಅತ್ಯಂತ ಆತ್ಮೀಯತೆ ಹಾಗೂ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಪಕ್ಷದ ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂದರು.

ಡಿ.ಟಿ.ಶ್ರೀನಿವಾಸ್ ಮಾತನಾಡಿ, ಒಪಿಎಸ್ ಜಾರಿಗೊಳಿಸುವ ಭರವಸೆ ಕಾಂಗ್ರೆಸ್ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಲ್ಲಿಗೂ ಇದು ಅನ್ವಯಿಸಲಿದೆ. ಒಂದೂವರೆ ದಶಕದಿಂದ ಕ್ಷೇತ್ರದಲ್ಲಿ ಒಬ್ಬರೇ ಪ್ರತಿನಿಧಿಸುತ್ತಿದ್ದರೂ ಶಿಕ್ಷಕರ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಎಸ್ಸಿ ಸೆಲ್ ರಾಜ್ಯ ಉಪಾಧ್ಯಕ್ಷ ರಘು, ಮುಖಂಡರಾದ ಬಿ.ಟಿ.ಜಗದೀಶ್‌, ಡಿ.ಟಿ.ವೆಂಕಟೇಶ್, ಮೈಲಾರಪ್ಪ, ಎನ್‌.ಡಿ.ಕುಮಾರ್‌, ಪ್ರಕಾಶ್ ರಾಮಾನಾಯ್ಕ, ಲಕ್ಷ್ಮಿಕಾಂತ್, ಅಂಜಿನಪ್ಪ, ಪಾಪಣ್ಣ, ನರಸಿಂಹರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net