ಪೂರ್ಣಚಂದ್ರತೇಜಸ್ವಿ ಜನ್ಮದಿನ ಆಚರಣೆ

ಪೂರ್ಣಚಂದ್ರತೇಜಸ್ವಿ ಜನ್ಮದಿನ ಆಚರಣೆ
Published on

ಸಕಲೇಶಪುರ: ಸಾಹಿತಿ ಪೂರ್ಣಚಂದ್ರತೇಜಸ್ವಿ ಮಲೆನಾಡಿನ ಪ್ರಕೃತಿಯ ಆರಾಧಕರಾಗಿದ್ದರು ಎಂದು ಉಪನ್ಯಾಸಕ ರೋಹಿತ್ ಹೇಳಿದರು.

ಶನಿವಾರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಪೂರ್ಣಚಂದ್ರತೇಜಸ್ವಿ ಜನ್ಮದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡಿನ ಪ್ರಕೃತಿಯನ್ನು ಹತ್ತಿರದಿಂದ ಅಸ್ಪಾಧಿಸಿ, ಅಧ್ಯಾಯನ ನಡೆಸಿ ಪುಸ್ತಕಗಳರೂಪದಲ್ಲಿ ಹೊರತಂದ ಮೊದಲಿಗರು ಪೂರ್ಣಚಂದ್ರ ತೇಜಸ್ವಿ. ಇವರ ಬರಹದ ವಿಶೇಷತೆಯಿಂದಾಗಿ ಎಲ್ಲವರ್ಗದ, ವಯೋಮಾನದ ಜನತೆಯು ಓದಬಹುದಾಗಿದ್ದರಿಂದಲೇ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ತೇಜಸ್ವಿ ಅವರ ಆರಂಭದ ಜೀವನದಲ್ಲಿ ರೈತಸಂಘದಂತಹ ಹಲವು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ,ಬದಲಾದ ಬದುಕಿನಲ್ಲಿ ಪ್ರಕೃತಿ,ಪ್ರಾಣಿ,ಪಕ್ಷಿಗಳೊಂದಿಗೆ ಮೂಕವಾಗಿ ಸಂವಾದ ನಡೆಸಲು ಆರಂಭಿಸಿದ ನಂತರ ಪ್ರಬುದ್ಧ ಬರಹಗಾರರಾಗಿ ಬದಲಾದರು. ಆದ್ದರಿಂದ, ತೇಜಸ್ವಿ ಅವರ ಬರಹಗಳನ್ನು ಹೆಚ್ಚಾಗಿ ಒದುವ ಮೂಲಕ ಬಧುಕನ್ನು ಸಾರ್ಥಕಗೊಳಿಸ ಬೇಕು ಎಂದರು.

ಹೆತ್ತೂರು ಹೋಬಳಿ ಕಸಾಪ ಅಧ್ಯಕ್ಷ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೃಷ್ಣಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net