

ಕೊಡೇಕಲ್ : ಬಸವತತ್ವ ಪ್ರಚಾರದ ಮೂಲಕ ಜನರಲ್ಲಿ ವೈಚಾರಿಕತೆ ಮೂಡಿಸುತ್ತ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ಡಾ.ಮಹಾಂತ ಶಿವಯೋಗಿಗಳು ಮಹಾನ್ ಚೇತನ. ಅವರ ಬದುಕೇ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಪ್ರಾಚಾರ್ಯೆ ರಾಚಮ್ಮ ಪೂಜಾರಿ ಹೇಳಿದರು.
ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯದಲ್ಲಿ ಶ್ರೀ ಡಾ.ಮಹಾಂತ ಶಿವಯೋಗಿಗಳ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ವ್ಯಸನಮುಕ್ತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಜೋಳಿಗೆ ಹಾಕಿ ಸಮಾಜದ ಜನರಲ್ಲಿನ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದ ಮಹಾನ್ ಶ್ರೀಗಳು. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಿದ ಪೂಜ್ಯರ ಜೀವನ ಕ್ರಮ ಅನುಕರಣೀಯವಾಗಿದೆ ಎಂದÀರು.
ಸಂಗೀತಾ, ಈರಮ್ಮ, ವಿಜಯಲಕ್ಷಿö್ಮÃ, ಪರ್ವಿನ್, ರೇಣುಕಾ, ಶಕುಂತಲಾ, ಭಾಗ್ಯಶ್ರೀ, ಮೈತ್ರಾ ಇತರರಿದ್ದರು.