

ಬಸವಕಲ್ಯಾಣ: ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಕೊಡಮಾಡುವ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ-2022ಗೆ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಕಲ್ಯಾಣ ಕನರ್ಾಟಕದ ಪ್ರತಿಷ್ಠಿತ ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಎರಡು ತೊಲ ಚಿನ್ನದ ಪದಕ ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಹಿರೇಮಠದಲ್ಲಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ಟೋಬರ್ 4ರಂದು ಶ್ರೀಮಠದಲ್ಲಿ ನಡೆಯಲಿರುವ ಶ್ರೀ ಗುರುಲಿಂಗ ಶಿವಾಚಾರ್ಯರ 53ನೇ ಪುಣ್ಯ ಸ್ಮರಣೋತ್ಸವ ಹಾಗೂ 36ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮಕ್ಕೆ ಎರಡು ದಿನ ಮುನ್ನ ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಶ್ರೀ ಗುರುಲಿಂಗ ಶಿವಾಚಾರ್ಯರ ಸ್ಮರಣೋತ್ಸವ ಒಂದು ಉತ್ಸವವಾಗದೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ನಾಡಿನ ಜನತೆಗೆ ಸದುಪಯೋಗವಾಗಲಿ ಎಂಬ ಆಶಯದಿಂದ 1988ರಿಂದ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಶ್ರೀಮಠದಿಂದ ಕೃತಿಗಳನ್ನು ಪ್ರಕಟಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸ ಮಾಲೆಯ 25ನೇ ವರ್ಷದ ರಜತೋತ್ಸವ ಸಂದರ್ಭದಲ್ಲಿ 2011ರಲ್ಲಿ ಶ್ರೀಮಠದಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಆರಂಭಿಸಿದ್ದು, ಪ್ರತಿವರ್ಷ ಭಾಷೆ, ಸಾಹಿತ್ಯ, ಸಂಗೀತ, ಕಲೆ, ಸಾಮಾಜಿಕ, ಧಾಮರ್ಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದುವರೆಗೆ ಒಂಬತ್ತು ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.
ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳು ಪೂಜೆ, ಲಿಂಗ ದೀಕ್ಷೆ, ಧಾಮರ್ಿಕ ಸಂಸ್ಕಾರದ ಜತೆಗೆ ಆಗಿನ ಕಾಲದಲ್ಲಿಯೂ ಅನೇಕ ಕವಿ, ಕಲಾವಿದರನ್ನು ಬರಮಾಡಿಕೊಂಡು ತತ್ವಗೀತೆ, ತತ್ವ ಪದಗಳ ಪ್ರಚಾರ-ಪ್ರಸಾರ ಮಾಡುತ್ತಿದ್ದರು. ನಂತರ ಲಿಂ.ಶ್ರೀ ಗುರುಲಿಂಗ ಶಿವಾಚಾರ್ಯರು ಈ ಪರಂಪರೆ ಮುಂದುವರಿಸಿದ್ದರು. ಶ್ರೀಮಠದಲ್ಲಿ 120 ವರ್ಷಗಳಿಂದ ಧಾಮರ್ಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
1988ರಲ್ಲಿ ಮೊದಲ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಹಿರಿಯ ಸಾಹಿತಿ ಪ್ರೊ.ಸೂಗಯ್ಯ ಹಿರೇಮಠ ಅವರಿಂದ ಆರಂಭವಾಗಿದ್ದು, `ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯ' ಮಠದಿಂದ ಪ್ರಕಟಿಸಿ ಬಿಡುಗಡೆಗೊಳಿಸಿದ ಮೊದಲ ಕೃತಿಯಾಗಿದೆ ಎಂದರು.
ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಮೊದಲು 50 ಸಾವಿರ ರೂ. ನಗದು ಮತ್ತು ಒಂದು ತೊಲ ಚಿನ್ನದ ಪದಕ ಒಳಗೊಂಡಿತ್ತು. ಈಗ 1 ಲಕ್ಷ ರೂ. ನಗದು ಮತ್ತು 2 ತೊಲ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕ ಪ್ರದಾನ ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಮಲ್ಲಿನಾಥ ಹಿರೇಮಠ, ಬಸವಪ್ಪ ಗಿಲ್ಕಿ, ಗುಂಡಯ್ಯ ಸ್ವಾಮಿ ಪೊಲೀಸ್ ಪಾಟೀಲ್, ಅಪ್ಪಣ್ಣ ಜನವಾಡ, ಚನ್ನಬಸಯ್ಯ ಮಠ ಇದ್ದರು.
ಕಲಬುರಗಿಯಲ್ಲಿ ಪ್ರದಾನ ಅ.2ರಂದು: ಶೈಕ್ಷಣಿಕ, ಸಾಮಾಜಿಕ ಮತ್ತು ಧಾಮರ್ಿಕ ಕ್ಷೇತ್ರದಲ್ಲಿನ ಅನುಪಮ ಸಾಧನೆ ಪರಿಗಣಿಸಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರನ್ನು ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅ.2ರಂದೇ ಬೆಳಗ್ಗೆ 11ಕ್ಕೆ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠಕ್ಕೆ ಹೋಗಿ ಜ್ಞಾನ ಸಂಪನ್ನರಾಗಿರುವ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಚನ್ನವೀರ ಶಿವಾಚಾರ್ಯರು ತಿಳಿಸಿದರು. ಪೂಜ್ಯರು ನವದೆಹಲಿಯ ಸಂಸತ್ ಭವನದ 8ನೇ ಮಹಾದ್ವಾರದಲ್ಲಿ 14 ಅಡಿ ಎತ್ತರದ ಅಶ್ವಾರೂಢ ಮಹಾತ್ಮ ಬಸವೇಶ್ವರ ಮೂತರ್ಿ ಸ್ಥಾಪಿಸಿದ್ದು, ಅಂದಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅನಾವರಣಗೊಳಿಸಿದ್ದರು. ಇದು ಪೂಜ್ಯರ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ ಎಂದರು.