

ಬೈಲಹೊಂಗಲ: ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಪೂಜೆ ಪುನಸ್ಕಾರ ಕೈಗೊಳ್ಳುವುದರಿಂದ ಮನಸ್ಸು ಸಮೃದ್ಧವಾಗಿರುತ್ತದೆ ಎಂದು ಬೆಳಗಾವಿ-ನಾಗನೂರಿನ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗನೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಹಿರೇಬಾಗೇವಾಡಿ, ಪ್ರಗತಿ ಬಂಧು ಸ್ವ-ಸಹಾಯ ಸಂಘ ಬೈಲವಾಡ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ಅದರ ಉನ್ನತೀಕರಣಕ್ಕೆ ಪ್ರಯತ್ನಿಸಬೇಕೆಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಜನ ಕಲ್ಯಾಣಕ್ಕೆ ಶ್ರೀ ಕ್ಷೇತ್ಚರ ಧರ್ಮಸ್ಥಳ ಸಂಘ ಶ್ರಮಿಸುತ್ತಿದೆ. ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತಲು ವರಮಹಾಲಕ್ಷ್ಮೀ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ರೋಹಿಣಿ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶೋಭಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಉಮೇಶ ಪಾಟೀಲ, ಡಿ.ಎಂ.ಪಾಟೀಲ, ತಾಪಂ ಮಾಜಿ ಸದಸ್ಯ ಬಾಬಾಗೌಡ ಶಿವನಾಯ್ಕರ, ಕೃಷ್ಣಜೀ ಕುಲಕರ್ಣಿ, ಯೋಜನಾಧಿಕಾರಿ ಕೆ.ಯೋಗೇಶ, ಜಯಶ್ರೀ ಪಾಟೀಲ, ಮೇಲ್ವಚಾರಕ ಪ್ರಶಾಂತ ಶೆಟ್ಟಿ, ಮಧು ಅರಳಿಕಟ್ಟಿ, ಕವಯಿತ್ರಿ ಜಾನಕಿದೇವಿ ಭದ್ರಣ್ಣವರ ಇತರರಿದ್ದರು.