ಪುಸ್ತಕದಿಂದ ಆಧ್ಯಾತ್ಮಿಕ ಚಿಂತನೆ ವೃದ್ಧಿ

book sri
ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ವಿಭಾಗ ವೇದಿಕೆ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆ ಉದ್ಘಾಟಿಸಿದ ಎಚ್.ಎಸ್.ಸುಬ್ರಹ್ಮಣ್ಯ ಅವರಿಗೆ ಮೇಘಾನಂದ ನೆನಪಿನ ಕಾಣಿಕೆ ನೀಡಿದರು. ರವಿಶಂಕರ್ ಇದ್ದರು.
Published on

ಶೃಂಗೇರಿ: ಗ್ರಂಥಾಲಯವು ಅರಿವಿನ ಜ್ಞಾನದೀವಿಗೆ ಇದ್ದಂತೆ. ಆಧುನಿಕ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನ ಗಳಿಸುತ್ತೇವೆ. ಪ್ರತಿಯೊಂದು ಜೀವಿಗೂ ಗಾಳಿ, ಬೆಳಕು ಎಷ್ಟು ಮುಖ್ಯವೋ ಹಾಗೆಯೇ ನಮಗೆ ಜ್ಞಾನ ಅಗತ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ತಿಳಿಸಿದರು.

ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ವಿಭಾಗ ವೇದಿಕೆ ಶನಿವಾರ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾನವೀಯ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಬೆಳಗಲು ಪುಸ್ತಕ ಸಹಕಾರಿ. ಮನುಷ್ಯನ ಸರ್ವತೋಮುಖ ಬೆಳವಣಿಗೆ ಪುಸ್ತಕದಿಂದ ಮಾತ್ರ ಸಾಧ್ಯ. ಗ್ರಂಥಾಲಯವನ್ನು ಜ್ಞಾನದೇಗುಲಕ್ಕೆ ಹೋಲಿಸಬಹುದು. ಭಾರತದ ಗ್ರಂಥಾಲಯದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಜನಿಸಿದ ಈ ದಿನವನ್ನು ಗ್ರಂಥಾಲಯ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು ಉತ್ತಮ ಪುಸ್ತಕ ಓದುವುದು ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಬಿ.ಜಿ.ಆಶಾ, ಅತಿಥಿ ಗ್ರಂಥಪಾಲಕ ಸಿ.ಮೇಘಾನಂದ, ಉಪನ್ಯಾಸಕ ಚೇತನ್, ಗ್ರಂಥಾಲಯ ಸಂಯೋಜಕ ರವಿಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net