ಪುಸ್ತಕ ಮೇಳ ಲಾಂಛನ ವಿನ್ಯಾಸಕ್ಕೆ ಆಹ್ವಾನ

Published on

ಚಾಮರಾಜನಗರ: ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಫೆ.28 ರಿಂದ ವ. 3ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಪುಸ್ತಕ ಮೇಳವನ್ನು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಆಯೋಜಿಸುತ್ತಿದ್ದು ಸದರಿ ಮೇಳಕ್ಕೆ ಸಂಬಂಧಿಸಿದ ಲಾಂಛನವನ್ನು ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

ಆಯ್ಕೆಗೊಳ್ಳುವ ಲಾಂಛನದ ವಿನ್ಯಾಸಕರಿಗೆ ಗೌರವ ಪೂರ್ವಕವಾಗಿ ಬಹುಮಾನ ನೀಡಲಾಗುತ್ತದೆ. ಆಸಕ್ತರು ಕಾರ್ಯಕ್ರಮಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ ತಮ್ಮ ಅಂಚೆ ವಿಳಾಸ ದೂರವಾಣಿ ಸಂಖ್ಯೆ, ಇನ್ನಿತರ ವಿವರಗಳೊಂದಿಗೆ ಕಾರ್ಯದರ್ಶಿಗಳ, ಕರ್ನಾಟಕ ವಿಧಾನಸಭೆ ಸಚಿವಾಲಯ, ಕೊಠಡಿ ಸಂಖ್ಯೆಯ 121, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಫೆಬ್ರವರಿ 3ರೊಳಗೆ ಕಳುಹಿಸುವಂತೆ ಕರ್ನಾಟಕ ವಿಧಾನಸಭೆ ಸಚಿವಾಲಯದ ನಿರ್ದೇಶಕರಾದ ಬಿ.ಎಸ್. ಮಹಾಲಿಂಗೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net