ಪುಸ್ತಕ ಬಿಡುಗಡೆ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಂಶಿ ಪ್ರಕಾಶನ ಬೆಂಗಳೂರು ಹಾಗೂ ಕೊಟಬಾಗಿ ಬಂಧುಗಳಿಂದ ಡಿ. 8 ರಂದು ಅನಂತ ಕೊಟಬಾಗಿ ಅವರ ಸತ್ಯಂ ಶಿವಂ ಸೌಂದರ್ಯಂ ಪುಸ್ತಕ ಬಿಡುಗಡೆ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಏರ್ಪಡಿಲಾಗಿದೆ ಎಂದು ಸಾಹಿತಿ ಡಾ. ಹ.ವೆಂ.ಕಾಖಂಡಕಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಯಾಗಿ ಸಾಹಿತಿ ಶ್ರೀನಿವಾಸ ವಾಡಪ್ಪಿ ಆಗಮಿಸಲಿದ್ದಾರೆ. ಮಾಲತಿ ಮುದಕವಿ, ಎಂ.ಎಸ್​. ಕೃಷ್ಣಮೂರ್ತಿ ಕೃತಿ ಪರಿಚಯ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಕೃಷ್ಣ ಕಟ್ಟಿ ವಹಿಸಲಿದ್ದಾರೆ ಎಂದರು.

ಡಾ.ಕೃಷ್ಣ ಕಟ್ಟಿ, ಅನಂತ ಕೊಟಬಾಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net