ಪುಸ್ತಕ ಬಿಡುಗಡೆ ಕಾರ್ಯಕ್ರಮ 12ರಂದು

9-55
ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಅವರ ಅಭಿನಂದನಾ ಸಮಾರಂಭ ಮತ್ತು ಗ್ರಂಥಗಳ ಕರಪತ್ರವನ್ನು ಆರ್‌ಎಸ್‌ಎಸ್ ಉತ್ತರ ಪ್ರಾಂತ ಸಹಸಂಘಚಾಲಕ ಅರವಿಂದರಾವ ದೇಶಪಾಂಡೆ, ಆರ.ಎ.ಜೋಶಿ ಬಿಡುಗಡೆ ಮಾಡಿದರು. ಮಹಾಲಿಂಗ ಮೇತ್ರಿ, ಆರ್.ಎ. ಜೋಶಿ, ಆರ.ಎಸ್. ದೊಡನಿಂಗಗೊಳ,ಎಸ್.ಎಂ.ಜೇರೆ ಇತರರು ಇದ್ದರು.
Published on

ಅಥಣಿ: ಸ್ಥಳೀಯ ಜೆ.ಎ. ಶಿಕ್ಷಣ ಸಂಸ್ಥೆ, ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಅನುಪಮ ಪ್ರಕಾಶನ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಅವರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ ಡಿ.12ರಂದು ಬೆಳಗ್ಗೆ 11ಗಂಟೆಗೆ ಕಾಲೇಜು ಆವರಣದಲ್ಲಿ ಜರುಗಲಿದೆ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ ಸಹಸಂಘಚಾಲಕ ಅರವಿಂದರಾವ್ ದೇಶಪಾಂಡೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಬಾಳಲೋಕ ಕೃತಿಯ ಕುರಿತು ಬಾಗಲಕೋಟೆಯ ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪನ್ಯಾಸ ನೀಡುವರು. ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿನಂದನಾ ಗ್ರಂಥಗಳ ಬಿಡುಗಡೆಗೊಳಿಸುವರು. ವಿಮರ್ಶಕ ಡಾ. ಗುರುಪಾದ ಮರೆಗುದ್ದಿ ಅಭಿನಂದನಾ ಭಾಷಣ ಮಾಡುವರು. ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ, ಜೆ.ಎ.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಅತಿಥಿಯಾಗಿ ಆಗಮಿಸುವರು ಎಂದರು.

ಇದಕ್ಕೂ ಪೂರ್ವ ಡಾ.ಬಾಳಾಸಾಹೇಬ ಲೋಕಾಪೂರ ಸಾಹಿತ್ಯ ವಿಚಾರ ಸಂಕೀರ್ಣ ಬೆಳಗ್ಗೆ 9.30 ಗಂಟೆಗೆ ಜರುಗಲಿದೆ. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಬಸವರಾಜ ಡೋಣೂರ ಅಧ್ಯಕ್ಷತೆ ವಹಿಸುವರು. ಸಣ್ಣಕಥೆಗಾರ ಡಾ.ವೆಂಕಟಗಿರಿ ದಳವಾಯಿ, ಕಾದಂಬರಿಕಾರ ಡಾ. ರಾಜಶೇಖರ ಹಳೆಮನಿ ಜೆ.ಎ. ಸಂಸ್ಥೆಯ ಉಪಕಾರ್ಯಾಧ್ಯಕ್ಷ ಎಸ್.ಎಂ. ಪಾಟೀಲ ಅತಿಥಿಗಳಾಗಿ ಭಾಗವಹಿಸುವರು ಎಂದರು. ಮಹಾಲಿಂಗ ಮೇತ್ರಿ, ಆರ್.ಎ. ಜೋಶಿ, ಆರ್.ಎಸ್. ದೊಡನಿಂಗಗೊಳ, ಎಸ್.ಎಂ. ಜೇರೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net