

ಚಿತ್ರದುರ್ಗ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥ್ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಚಿತ್ರದುರ್ಗದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಪುಸ್ತಕ ಪ್ರದರ್ಶನಕ್ಕೆ ಸಾಹಿತಿ ಆನಂದ್ ಕುಮಾರ್ ಚಾಲನೆ ನೀಡಿದರು.
ತಾಪಂ ನಿವೃತ್ತ ಅಧೀಕ್ಷಕ ಹನುಮಂತ ರಾಯ, ಪರಿಸರವಾದಿ ಡಾ.ಎಚ್‌ಕೆಎಸ್ ಸ್ವಾಮಿ, ಮುಖ್ಯ ಗ್ರಂಥಾಲಯಾಧಿಕಾರಿ ಬಸವರಾಜ ಕೊ ಳ್ಳಿ, ಸಹ ಗ್ರಂಥಪಾಲಕ ಮೋಹನ್‌ದಾಸ್ ಮತ್ತಿತರರು ಇದ್ದರು.
ಸಪ್ತಾಹದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವದ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು.
...