ಪುಸ್ತಕ ಖರೀದಿಸುವ ಮನೋಭಾವ ಬೆಳೆಸಿಕೊಳ್ಳಿ

katte
Published on

ಬೀದರ್: ಪುಸ್ತಕ ಖರೀದಿಸಿ ಓದುವ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ನಗರದಲ್ಲಿ ಬುಧವಾರ ಸಾಹಿತಿ ಶಿವಕುಮಾರ ಕಟ್ಟೆ ರಚಿತ ನಾಲ್ದೇರಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ, ಇತಿಹಾಸ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಸ್ಥಳೀಯ ಸಾಹಿತಿಗಳ ಬೆಳವಣಿಗೆಗೆ ಕೈಲಾದಷ್ಟು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಶಿವಕುಮಾರ ಕಟ್ಟೆ ಉತ್ತಮ ಸಾಹಿತಿಯಾಗಿದ್ದು, ಒಳ್ಳೆಯ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಪುಸ್ತಕದಲ್ಲಿ ಸುಂದರವಾಗಿ ಹಂಚಿಕೊಂಡಿದ್ದಾರೆ. ಸಾಕಷ್ಟು ಮಾಹಿತಿ ಹೊಂದಿರುವ ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದರು. ಸಚಿವರು ಸ್ಥಳದಲ್ಲೇ ಪುಸ್ತಕವನ್ನು ಖರೀದಿಸಿದರು.

ಸಚಿವರ ವಿಶೇಷ ಕರ್ತವ್ಯಾಧಿಕಾರಿ, ಸಾಹಿತಿ ಶಿವಕುಮಾರ ಕಟ್ಟೆ ಮಾತನಾಡಿ, ಉತ್ತರ ಹಾಗೂ ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಗಮನಿಸಿರುವ ಅಂಶ ಮತ್ತು ಹೊಸ ಅನುಭವಗಳನ್ನು ನಾಲ್ದೇರಾ ಕೃತಿಯ ಮೂಲಕ ಹೊರತಂದಿರುವೆ. ಸಚಿವ ಚವ್ಹಾಣ್ ಅವರ ಹೆಸರಿನ `ಪ್ರಭು' ಪ್ರಕಾಶನದ ಮೂಲಕ ಈ ಪುಸ್ತಕ ಮುದ್ರಣಗೊಂಡಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಾಹಿತಿಗಳಾದ ದೇಶಾಂಶ ಹುಡಗಿ, ಡಾ.ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ರಘುನಾಥ ಹಡಪದ, ರಜಿಯಾ ಬಳಬಟ್ಟಿ, ಬಸವರಾಜ ಬಲ್ಲೂರ, ಸುನೀತಾ ಬಿರಾದಾರ, ಮುಖಂಡರಾದ ಅಶೋಕ ಹೊಕ್ರಾಣೆ, ಶಶಿ ಹೊಸಳ್ಳಿ, ಬಂಡೆಪ್ಪ ಕಂಟೆ, ರೇವಣಸಿದ್ದಪ್ಪ ಜಲಾದೆ, ಗುರುನಾಥ ರಾಜಗೀರಾ, ಪ್ರಕಾಶ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಸಕರ್ಾರಿ ಪಾಲಿಟೆಕ್ನಿಕ್ ಕಾಲೇಜಿನ ಬಕ್ಕಪ್ಪ ನಿರ್ಣೆಕರ್, ಮಲ್ಲಿಕಾರ್ಜುನ, ರವೀಂದ್ರಕುಮಾರ ಬಡಿಗೇರ್, ಚನ್ನಬಸಪ್ಪ ಪಾಟೀಲ್, ಗೌತಮ, ಎಂ.ಡಿ.ವಕೀಲ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net