ಪುಸ್ತಕ ಓದು ಜ್ಞಾನ ವಿಸ್ತರಣೆಗೆ ಮಾರ್ಗ

30 ckm 12
ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ 'ಪುಸ್ತಕ ಓದು-ಉಪನ್ಯಾಸ'ಹಾಗೂ 'ರಸಪ್ರಶ್ನೆ ಸ್ಪರ್ಧೆ'ಮತ್ತು 'ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಮೊರಾರ್ಜಿ ದೇಸಾಯಿ ವಸತಿ ನಿಲಯದ ಪ್ರಾಚಾರ್ಯೆ ಕೆ.ಪಿ.ಶೈಲ ಉದ್ಘಾಟಿಸಿದರು. ಕುಂದೂರು ಅಶೋಕ್, ಮಂಜುಳಾ ಹುಲ್ಲಹಳ್ಳಿ, ಪುಷ್ಪರಾಜ್ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಪುಸ್ತಕ ಓದುವುದರಿಂದ ಮನುಷ್ಯನ ಜ್ಞಾನದ ಆಳ-ಅಗಲ ವಿಸ್ತಾರವಾಗುತ್ತದೆ ಎಂದು ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ, ಲೇಖಕಿ .ಡಾ. ಮಂಜುಳಾ ಹುಲ್ಲಹಳ್ಳಿ ತಿಳಿಸಿದರು.

ತಾಲೂಕಿನ ಬಿಳೇಕಲ್ಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ 'ಪುಸ್ತಕ ಓದು-ಉಪನ್ಯಾಸ'ಹಾಗೂ 'ರಸಪ್ರಶ್ನೆ ಸ್ಪರ್ಧೆ'ಮತ್ತು 'ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಓದುವುದು ಮತ್ತು ಬರೆಯುವುದು ಉತ್ತಮ ಹವ್ಯಾಸ. ಪುಸ್ತಕ ಸಂಸ್ಕೃತಿಯಿAದ ಮನುಷ್ಯನಿಗೆ ಉತ್ತಮ ಸಂಸ್ಕಾರ ಸಿಕ್ಕಿ ಸಮಾಜದಲ್ಲಿ ಸಹಬಾಳ್ವೆಗೆ ಸಹಕಾರಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಪ್ರಾಚಾರ್ಯೆ ಕೆ.ಪಿ.ಶೈಲ, ನಾಡು-ನುಡಿ ಹಾಗೂ ಸಂಸ್ಕೃತಿ ಕಟ್ಟುವ ಕಾರ್ಯದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಯಾಗಿದೆ ಎಂದು ಶ್ಲಾಘಿಸಿದರು.

ಶಾಲಾ-ಕಾಲೇಜುಗಳಲ್ಲಿ ಇಂತಹ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿದಂತಾಗುತ್ತದೆ ಎಂದು ತಿಳಿಸಿದರು.

ಲೇಖಕಿ ಡಾ. ಮಂಜುಳಾ ಹುಲ್ಲಹಳ್ಳಿಯವರ ಕೃತಿ ಚಿಕ್ಕಮಗಳೂರು ನೆಲೆ-ಬೆಲೆ ೨ ಪುಸ್ತಕ ಕುರಿತು ಮಾತನಾಡಿದ, ಸಹಾಯಕ ಪ್ರಾಧ್ಯಾಪಕಿ ಎ.ಆರ್. ಸುಧಾ, ನಮ್ಮ ಜಿಲ್ಲೆಯ ಹೆಮ್ಮೆ ಪಡುವಂತಹ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪೌರಾಣಿಕ ಕಥೆಗಳನ್ನು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್, ಗ್ರಾಮೀಣ ಭಾಗದ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಸಹಬಾಳ್ವೆ ಯಂತಹ ಬದುಕನ್ನು ಕಲಿಸಲು ಪ್ರತಿಷ್ಠಾನ ಪ್ರಯತ್ನಿಸುತ್ತಿದೆ ಎಂದರು.

ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್, ವಿದ್ಯಾರ್ಥಿಗಳಲ್ಲಿ ನಾಡು-ನುಡಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಶಾಲಾ-ಕಾಲೇಜುಗಳಲ್ಲಿ ವ್ಯಾಪಕವಾಗಿ ಹಮ್ಮಿ ಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net