

ಬೇಲೂರು: ಪುಷ್ಪಗಿರಿ ಸಾವಯವ ಕೃಷಿಕರ ಸಂಘದ ದಶಮಾನೋತ್ಸವ ಹಾಗೂ ಪುಷ್ಪಗಿರಿ ಪಾರಂಪರಿಕ ರೈತರ ಉತ್ಪಾದಕ ಸಂಸ್ಥೆ ಲೋಕಾರ್ಪಣೆ ಮತ್ತು ಕೃಷಿ ಮೇಳವನ್ನು ದಿನಾಂಕ:13-1-2023 ರಂದು ಬೆಳಗ್ಗೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀಸೋಮಶೇಖರ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕಳೆದ 15 ವರ್ಷಗಳಿಂದ ಕೃಷಿಗೆ ಹೆಚ್ಚು ಉತ್ತೇಜನ ನೀಡುತಿದ್ದು, ಶ್ರೀಮಠಕ್ಕೆ ಸಂಬಂಧಿಸಿದ ಚಿಲ್ಕೂರು ಸಮೀಪ 30 ಎಕರೆ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಹಾಗೂ ಆಧಾಯ ತರುವ ಬೆಳೆಗಳಿಗೆ ಅಧ್ಯತೆ ನೀಡಲಾಗಿದೆ. ಸಾವಯವ ಕೃಷಿ ಬಗ್ಗೆ ರೈತರಿಗೆ ತಿಳಿಸಬೇಕೆಂದು ಪುಷ್ಪಗಿರಿ ಮಠದಲ್ಲಿ ಸಾವಯವ ಕೃಷಿಕರ ಸಂಘ ಪ್ರಾರಂಭಿಸಿ, ನುರಿತ ತಜ್ಞರಿಂದ ಕಾರ್ಯಗಾರದ ಮೂಲಕ ಅರಿವು ಮೂಡಿಸಲಾಗಿದೆ
. ಸಾವಯವ ಕೃಷಿ ಉತ್ಪಾದನೆಗೂ ಸಹ ಪ್ರೋತ್ಸಾಹ ನೀಡಲಾಗುತ್ತಿದೆ. ಸಾವಯವ ಕೃಷಿಕರ ಸಂಘಕ್ಕೆ ಹತ್ತು ವರ್ಷ ತುಂಬಿದ ಕಾರಣ ದಶಮಾನೋತ್ಸವ ಕಾರ್ಯಕ್ರಮ ಮತ್ತು ಪುಷ್ಪಗಿರಿ ಪಾರಂಪರಿಕ ರೈತ ಉತ್ಪಾದಕ ಸಂಸ್ಥೆಯನ್ನು ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿ.ಸಿ.ಪಾಟೀಲ್ 1-2023ರಂದು ಶುಕ್ರವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಸಾವಯವ ಕೃಷಿಕರು ಮತ್ತು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಮಹಿಳಾ ಸ್ವಸಹಾಯ ಸಂಘದಿಂದ ವಿವಿಧ ಉತ್ಪನ್ನಗಳ ಮಳಿಗೆ ಸೇರಿದಂತೆ ಬೃಹತ್ ಮಟ್ಟದ ಕೃಷಿ ಮೇಳವನ್ನು ಸಹ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಗೋಪಾಲಯ್ಯನವರು ಮತ್ತು ಇನ್ನುಳಿದ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಪ್ರಗತಿಪರ ರೈತರು ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.