ಪುಷ್ಪಗಿರಿ ಮಠದಲ್ಲಿ 23ಕ್ಕೆ 38 ಅಡಿ ಶಿವನ ವಿಗ್ರಹ ಅನಾವರಣ

god shiva
Published on


ಹಾಸನ : ಬೇಲೂರು ತಾಲೂಕಿನ ಪುಷ್ಪಗಿರಿ ಮಠದಲ್ಲಿ ನ.23ರಂದು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ 38 ಅಡಿ ಶಿವನ ವಿಗ್ರಹ ಅನಾವರಣ ಹಾಗೂ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಚಾರಕ್ಕೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪದಾಧಿಕಾರಿಗಳು ಬೇಲೂರಿನ ಈಶ್ವರ ದೇಗುಲ ಆವರಣದಲ್ಲಿ ಚಾಲನೆ ನೀಡಿದರು.


ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತಾ ಮಾತನಾಡಿ, ತಾಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅವರು 15 ವರ್ಷಗಳಿಂದ ಮಠವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಭಕ್ತರ ಬೇಡಿಕೆ ಅರಿತು ಮಠದಲ್ಲೆ 38 ಅಡಿ ಎತ್ತರದ ಶಿವನ ವಿಗ್ರಹ ನಿರ್ಮಿಸಿದ್ದು. ನ.23ರಂದು ರಾಜ್ಯಪಾಲರು ಲೋಕಾರ್ಪಣೆ ಮಾಡಲಿದ್ದಾರೆ. ನ.24ರಂದು ಕಲಾಮಂದಿರ ಸಹ ಉದ್ಘಾಟಿಸಲಾಗುವುದು. ಅಲ್ಲದೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಪ್ರಥಮ ಸಮಾವೇಶ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಮಹಿಳಾ ಸಂಘದ ಸದಸ್ಯರು ಆಗಮಿಸಬೇಕು ಎಂದು ಮನವಿ ಮಾಡಿದರು.


ಯೋಜನೆಯ ಬೇಲೂರು ಮಹಿಳಾ ಘಟದ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ದಾಕ್ಷಾಯಿಣಿ, ನೇತ್ರಾವತಿ, ಕುಂತಿಬಾಯಿ, ಆಶಾ, ಜ್ಯೋತಿ, ಲಲಿತಮ್ಮ, ರಾಣಿ, ಹೇಮಾವತಿ, ಶಿಲ್ಪ, ಪಾರ್ವತಿ, ವೀಣಾ, ಅಲ್ಫಿಯಾ ಬಾನು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net