ಪುರೋಹಿತರು, ಅರ್ಚಕರು ಸದಸ್ಯತ್ವ ಪಡೆಯಲು ಮನವಿ

ಪುರೋಹಿತರು, ಅರ್ಚಕರು ಸದಸ್ಯತ್ವ ಪಡೆಯಲು ಮನವಿ
Published on

ಹಾಸನ: ಪುರೋಹಿತರು, ಅರ್ಚಕರ ಶ್ರೇಯೋಭಿವೃದ್ಧಿಗಾಗಿ ಮತ್ತು ಸಂಘಟನೆಗಾಗಿ ಒಕ್ಕೂಟ ರಚಿಸಲಾಗಿದ್ದು, ಎಲ್ಲಾ ಅರ್ಚಕರು ಮತ್ತು ಪುರೋಹಿತರು ಇದರ ಸದಸ್ಯತ್ವ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿಂದು ದೇವಾಲಯಗಳ ಅರ್ಚಕರು ಮತ್ತು ಪುರೋಹಿತ ಒಕ್ಕೂಟದ ರಾಜ್ಯಾಧ್ಯಕ್ಷ ವಿಶ್ವನಾಥ ದೀಕ್ಷಿತ್ ಮನವಿ ಮಾಡಿದರು.

ಎಲ್ಲಾ ವರ್ಗದ ಅರ್ಚಕ ಮತ್ತು ಪುರೋಹಿತ ಬಾಂಧವರಿಗೆ ಮನೋವಿಕಾಸ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಸಂಸ್ಕೃತ ಶಿಕ್ಷಣ ಪಸರಿಸುವ ಸಲುವಾಗಿ ಸಂಘ ಸ್ಥಾಪಿತವಾಗಿದೆ. ಸರ್ವರಿಗೂ ವೇದ ತರಗತಿಗಳ ಆಯೋಜನೆ ಮತ್ತು ಪ್ರಾಚೀನ ಪುರಾಣ ಗ್ರಂಥಗಳ ಅವಲೋಕನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ ಧರ್ಮದ ಬೆಳವಣಿಗೆಗಾಗಿ ಧಾರ್ಮಿಕ ಶಿಕ್ಷಣ ನೀಡುವ ಸಲುವಾಗಿ ಸಂಘ ನಿರ್ಮಾಣ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಯ್ದ ದೇವಾಲಯಗಳಲ್ಲಿ ಧಾರ್ಮಿಕ ಸಭೆಗಳ ಆಯೋಜನೆ ಮತ್ತು ಧರ್ಮ ಪ್ರಚಾರ ಮತ್ತು ಎಲ್ಲಾ ಅರ್ಚಕ, ಪುರೋಹಿತ ಬಂಧುಗಳಲ್ಲಿ ಸಾಮಾಜಿಕ ಸಾಮರಸ್ಯ ವರ್ಧನೆಗಾಗಿ ಸಂಘದಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಸಂಕಷ್ಟದಲ್ಲಿರುವ ಅರ್ಚಕರು ಮತ್ತು ಪುರೋಹಿತರ ನೆರವಿಗೆ ಸ್ಪಂದನೆ, ದೇವಾಲಯ ಕೇಂದ್ರವಾಗಿರಿಸಿ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡುವುದು ಸಂಘದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಭಾರದ್ವಾಜ್, ಯಶ್ವಂತ್, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net