ಪುರುಷ ಕಾಣೆ ಸುಳಿವಿಗೆ ಸಹಕರಿಸಲು ಮನವಿ

IMG_20250121_145826
Published on

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಸುಣ್ಣದಕೇರಿ ನಿವಾಸಿ ಮಹದೇವ ನಾಯಕ ಎಂಬುವವರು ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

50 ವರ್ಷದ ಮಹದೇವನಾಯಕ 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಬಲಗೈ ಮತ್ತು ಬಲಗಾಲಿಗೆ ಪಾರ್ಶ್ವವಾಯು ಆಗಿದ್ದು ಕಾಲನ್ನು ಎಳೆದು ನಡೆದಾಡುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಸ್ಕೆಟ್ ಕಲರ್ ಶರ್ಟು, ನೀಲಿ ಬಣ್ಣದ ಲುಂಗಿ ಧರಿಸಿದ್ದರು. ಇವರ ಸುಳಿವು ದೊರೆತಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆ ದೂ.ಸಂ. 08226-222228 ಸಂಪರ್ಕಿಸುವಂತೆ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net