ಪುರಾತನ ಸಂಸ್ಕೃತಿಯೇ ಭಾರತದ ಜೀವಾಳ

31ydg03
Published on


ಯಾದಗಿರಿ: ನಮ್ಮ ಆಚಾರ, ವಿಚಾರಗಳು ಹಾಗೂ ಪೂರ್ವಜರು ಹಾಕಿಕೊಟ್ಟ ಪುರಾತನ ಸಂಸ್ಕಾರವೇ ಭಾರತದ ಜೀವಾಳವಾಗಿದೆ ಎಂದು ಭಾರತಿ ಎಸ್.ದರ್ಶನಾಪುರ ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ನಿಮಿತ್ತ ಗುರುವಾರ ನಗರದ ಚರಬಸವೇಶ್ವರ ಗದ್ದುಗೆಯಲ್ಲಿ ಸಂಗೀತ ಸೇವಾ ಸಮಿತಿಯಿಂದ ಆಯೋಜಿಸಿದ್ದ 15ನೇ ವರ್ಷದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ಷದ 12 ತಿಂಗಳಲ್ಲಿ ಶ್ರಾವಣಕ್ಕೆ ಮಹತ್ವವಿದೆ. ಕಾರಣ ಸಾಲುಸಾಲು ಹಬ್ಬಗಳು ಬರುತ್ತವೆ. ಹಬ್ಬ, ಉತ್ಸವಗಳನ್ನು ನಮ್ಮಲ್ಲಿನ ಚೈತನ್ಯವನ್ನು ಹೆಚ್ಚಿಸುತ್ತವೆ ಎಂದರು.
ಶಹಾಪುರದ ಗದ್ದುಗೆಯಲ್ಲಿ ಹಲವು ವರ್ಷಗಳಿಂದ ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಸಂಗೀತ ಸೇವಾ ಸಮಿತಿಯಿಂದ ಪಾರಂಪರಿಕವಾದ ಮತ್ತು ಮಹಿಳೆಯರ ನಂಬುಗೆಯ ಉಡಿ ತುಂಬುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿರುವದು ಶ್ಲಾಘನೀಯವಾಗಿದೆ.
ಮಹಿಳೆಯರಿಗೆ ಅರಿಶಿಣ, ಕುಂಕುಮದೊಂದಿಗೆ ಉಡಿ ತುಂಬುವದು ಸಮೃದ್ಧಿ, ಸೌಭಾಗ್ಯದ ಸಂಕೇತ ಎಂದು ತಿಳಿಸಿದರು.

ಸಾನಿಧ್ಯವನ್ನು ಚನ್ನವೀರ ಶಿವಾಚಾರ್ಯರು ವಹಿಸಿದ್ದರು. ಶ್ರೀ ಬಸವಯ್ಯ ಶರಣರು, ಶರಣು ಗದ್ದುಗೆ, ಶೀಲವಂತಯ್ಯ ಗದ್ದುಗೆ, ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಆನೆಗುಂದಿ, ಮಹೇಶ್ ಅವಂಟಿ, ಬಸ್ಸಮ್ಮ ಗೌಡತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net