ಪುರಾತನ ಬಾವಿ ತಡೆಗೋಡೆ ಕುಸಿತ

9-RNR-03
Published on

ರಾಣೆಬೆನ್ನೂರ: ಾಲೂಕಿನ ಚಿಕ್ಕಹರಳಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದ ಪುರಾತನ ಬಾವಿಯ ತಡೆಗೋಡೆ ಕುಸಿದು ಬಿದ್ದಿದ್ದು, ಗ್ರಾಮಸ್ಥರು ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ.

ಕಳೆದ ವರ್ಷ ಸುರಿದ ಮಳೆಯಿಂದ ಬಾವಿಯ ತಡೆಗೋಡೆ ಕುಸಿದು ಬಿದ್ದಿದೆ. ಬಾವಿ 300 ಅಡಿಗೂ ಅಧಿಕ ಆಳವಿದೆ. ದೇ ಮಾರ್ಗವಾಗಿ ನಿತ್ಯವೂ ನೂರಾರು ಜನ ಓಡಾಡುತ್ತಾರೆ. ಆದರೆ, ಬಾವಿಗೆ ತಡೆಗೋಡೆ ಇಲ್ಲದ ಕಾರಣ ಮಕ್ಕಳು, ವೃದ್ಧರು ಆಯತಪ್ಪಿ ಬಿದ್ದು ಪ್ರಾಣಹಾನಿಯಂಥ ಘಟನೆ ಸಂಭವಿಸಿದರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.

ಚಿಕ್ಕಹರಳಹಳ್ಳಿ ಚಿಕ್ಕಕುರುವತ್ತಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಬಾವಿಗೆ ತಡೆಗೋಡೆ ಮಾಡುವಂತೆ ಹಾಗೂ ತಾತ್ಕಾಲಿಕವಾಗಿ ತಂತಿಯ ಜಾಲರಿ ಅಳವಡಿಸುವಂತೆ ಪಿಡಿಒಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಈ ಕುರಿತು ಕೇಳಿದರೆ ಉಡಾಫೆಯಾಗಿ ಉತ್ತರಿಸುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮದ ನಿವಾಸಿ ಚಿತ್ತರಂಜನ ಮರೋಳ ಒತ್ತಾಯಿಸಿದ್ದಾರೆ.

ಚಿಕ್ಕಹರಳಹಳ್ಳಿ ಗ್ರಾಮದ ಬಾವಿ ಸಮಸ್ಯೆ ಕುರಿತು ಪಿಡಿಒಗೆ ಸೂಚಿಸಿ ಕೂಡಲೆ ಅದಕ್ಕೆ ತಡೆಗೋಡೆ ನಿರ್ವಿುಸಲು ಹೇಳುತ್ತೇನೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮುಳ್ಳಿನ ಗಿಡಗಳನ್ನಿಟ್ಟು ಆ ಭಾಗದಲ್ಲಿ ಜನತೆ ಓಡಾಡದಂತೆ ಎಚ್ಚರವಹಿಸಲು ತಿಳಿಸುತ್ತೇನೆ. | ಎಸ್.ಎಂ. ಕಾಂಬಳೆ, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net